ಹಾಸನ: ಜೋಳ, ರಾಗಿ, ಭತ್ತ..ಹೀಗೆ ರೈತರು ಕಣಗಳಲ್ಲಿ ಒಕ್ಕಣೆ ಮಾಡುವ ಬದಲು ರಸ್ತೆಗೆ ಬೆಳೆ ಸುರಿದು ವಾಹನ ಹರಿದ ನಂತರ ಸುಲಭವಾಗಿ ಒಕ್ಕಣೆ ಮಾಡಿಕೊಳ್ಳುವುದು ಗ್ರಾಮಾಂತರ ಪ್ರದೇಶಗಳಲ್ಲಿ ಸಹಜವಾಗಿ ಕಾಣಸಿಗುತ್ತದೆ.
ಹೀಗೆ ಹಾಸನದ ಅಮೃತೂರು ಹೋಬಳಿ ಹಾಗೂ ಕುಣಿಗಲ್ ತಾಲ್ಲೂಕಿನಲ್ಲಿ ಕುಪ್ಪೆಯಿಂದ ಸಣಬಕ್ಕೆ ಹೋಗುವ ಮಾರ್ಗದಲ್ಲಿ ಒಣಗಿದ ತೊಗರಿಯನ್ನು ಒಕ್ಕಣೆಗೆ ಹಾಕಲಾಗಿತ್ತು. ಮೊದಲೇ ಬಿಸಿಲಿಗೆ ಕಾದಿದ್ದ ತೊಗರಿ ಕಡ್ಡಿಗಳು ಕಾರಿನ ಎಂಜಿನಿಗೆ ತಗುಲಿದ ಪರಿಣಾಮ ತಕ್ಷಣ ಕಾರಿಗೆ ಬೆಂಕಿ ಹತ್ತಿಕೊಂಡಿದೆ.
ಕಾರಿಗೆ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದವರು ಸಮಯ ಪ್ರಜ್ಞೆಯಿಂದ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣಕ್ಕೆ ಸ್ಥಳದಲ್ಲಿ ನೀರು ಸಿಗದ ಕಾರಣ ಕಾರು ಬಹುತೇಕ ಸುಟ್ಟು ಕರಕಲಾಗಿದೆ. ಕುಣಿಗಲ್ ಠಾಣೆಯಲ್ಲಿ ದೂರು ದಾಖಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel