ಹಾಸನ: ಎಣ್ಣೆ ಪಾರ್ಟಿ ಮಾಡುವ ನೆಪದಲ್ಲಿ ಕರೆದೊಯ್ದು ಕೆಇಬಿ(ಸೆಸ್ಕ್ ) ಸಿಬ್ಬಂದಿ ಸಂತೋಷ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗಿನ ಮೂವರು ಸೇರಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜನವರಿ 15ರಂದು ಹಾಸನದ ಹೂವಿನಳ್ಳಿ ಕಾವಲು ಬಳಿ ಸೆಸ್ಕ್ ಸಿಬ್ಬಂದಿ ಸಂತೋಷ್ನನ್ನು 5 ಬಾರಿ ಗುಂಡು ಹೊಡೆದು ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಹಾಸನ ಗ್ರಾಮಾಂತರ ಪೊಲೀಸರು, ಮಡಿಕೇರಿ ತಾಲ್ಲೂಕಿನ ಮಕ್ಕಂದೂರು ಗ್ರಾಮದ ಅನುಕೂಲ, Áಜ, ಸತೀಶ ಮತ್ತು ಹಾಸನದ ಆದರ್ಶ ಎಂಬುವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸೆಸ್ಕ್ ನಲ್ಲೇ ಕರ್ತವ್ಯ ನಿರ್ವಹಿಸಿಕೊಂಡಿದ್ದ ಸಂತೋಷ್ ತಂದೆ ಸಣ್ಣೇಗೌಡ ಕರ್ತವ್ಯದಲ್ಲಿ ಇರುವಾಗ ಅಪಘಾತದಲ್ಲಿ ಮೃತಪಟ್ಟ ಕಾರಣ ಮೃತ ಸಂತೋಷ್ಗೆ ಅನುಕಂಪ ಆಧಾರದ ಮೇಲೆ ಕೆಲಸ ದೊರೆತಿತ್ತು.
ಆದರೆ, ಕಳೆದ ಎರಡು ವರ್ಷದಿಂದ ಸಂತೋಷ್ ಕೌಟುಂಬಿಕ ಕಲಹದಿಂದ ಕರ್ತವ್ಯಕ್ಕೆ ಗೈರಾಗುತ್ತಿದ್ದ ಎನ್ನಲಾಗಿದೆ. ಹೀಗಾಗಿ ಇಲಾಖೆ ನೋಟೀಸ್ ಜಾರಿಗೊಳಿಸಿತ್ತು. ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಸಂತೋಷ್ನನ್ನು ಸಂಬಂಧಿ ಬಂಧಿತ ಅನುಕುಲ ಎಣ್ಣೆ ಪಾರ್ಟಿ ಮಾಡೋಣ ಎಂದು ಕರೆಸಿಕೊಂಡಿದ್ದ. ಎಲ್ಲರೂ ಹಾಸನದ ಹೂವಿನಳ್ಳಿ ಕಾವಲು ಬಳಿಯ ಖಾಲಿ ಜಾಗದಲ್ಲಿ ಪಾರ್ಟಿ ಮಾಡುತ್ತಿದ್ದರು. ಇ ವೇಳೆ ರಿವಾಲ್ವರ್ ನಲ್ಲಿ 5 ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿರುವುದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಹಾಸನ ಗ್ರಾಮಾಂತರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








