ಈತ ತಂದೆ ಅಲ್ಲ… ರಾಕ್ಷಸ : ನಿರಂತರ ಮಗಳ ಮೇಲೆಯೇ ಅತ್ಯಾಚಾರ, ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ..!
ತಮಿಳುನಾಡು: ಕುಡುಕ ತಂದೆಯೋರ್ವ ತಾನು ಜನ್ಮ ನೀಡಿದ ಮಗಳ ಮೇಲೆಯೇ ನಿರಂತರ ಅತ್ಯಚಾರವೆಸಗಿ ಪೈಶಾಚಿಕತೆ ಮೆರೆದಿದ್ದಾನೆ. ತಂದೆಯಿಂದ ನಿರಂತರ ಅತ್ಯಾಚಾರಕ್ಕೆ ಒಳಗಾಗಿದ್ದ 17 ವರ್ಷದ ಯುವತಿ ಇದೀಗ ಮಗುವಿಗೂ ಜನ್ಮ ನೀಡಿದ್ದಾಳೆ. ಮದ್ಯವ್ಯಸನಿಯಾಗಿದ್ದ ತಂದೆ ಪದೇಪದೇ ಅತ್ಯಾಚಾರ ಎಸಗುತ್ತಿದ್ದ. ಈ ಆರೋಪಿಗೆ 2003 ರಲ್ಲಿ ಹೆಣ್ಣು ಮಗು ಜನಿಸಿದ್ದು, ಆತನ ಪತ್ನಿ ಮೃತಪಟ್ಟಿದ್ದಳು. ಬಳಿಕ ಮಗು ಅಜ್ಜಿಮನೆಯಲ್ಲಿ ಬೆಳೆದಿತ್ತು. ಪತ್ನಿ ನಿಧನದ ನಂತರ ಮುಂಬೈಗೆ ಸ್ಥಳಾಂತರಗೊಂಡಿದ್ದ ಆರೋಪಿ ಅಲ್ಲಿ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದ. ಅವರಿಗೆ ಇಬ್ಬರು ಮಕ್ಕಳು ಜನಿಸಿದ್ದಾರೆ.
ಕೊರೊನಾ ಲಸಿಕೆಯ ಕಾಲ್ ಬಂದ್ರೆ ಎಚ್ಚರ..! ಇಂತಹದ್ದೇ ಕರೆ ನಂಬಿ 12 ಲಕ್ಷ ರೂ. ಕಳೆದುಕೊಂಡ ವೃದ್ಧ.!
ಕಳೆದ ವರ್ಷ ಲಾಕ್ ಡೌನ್ ವೇಳೆ ಈತ ತನ್ನ 2ನೇ ಪತ್ನಿ ಮತ್ತು ಮಕ್ಕಳೊಂದಿಗೆ ತನ್ನ ತವರಿಗೆ ಮರಳಿದ್ದ. ಬಳಿಕ ಕಳೆದ ವರ್ಷದ ಏಪ್ರಿಲ್ ನಲ್ಲಿ ಆತನ 2ನೇ ಪತ್ನಿಯೊಂದಿಗೆ ಜಗಳವಾಗಿ ಬೇರೆಯಾಗಿದ್ದ. ಬಳಿಕ ಅಕ್ಕಿ ಗಿರಣಿಯಲ್ಲಿ ಕಾರ್ಮಿಕನಾಗಿ ಕೆಲಸಕ್ಕೆ ಸೇರಿಕೊಂಡ ಆರೋಪಿ ಅಜ್ಜಿ ಮನೆಯಲ್ಲಿದ್ದ ಮೊದಲ ಪತ್ನಿ ಮಗಳನ್ನು ಕರೆದುಕೊಂಡು ಬಂದಿದ್ದ. ಆದ್ರೆ ಪ್ರತಿನಿತ್ಯ ಮದ್ಯ ಸೇವಿಸಿ ಮನೆಗೆ ಬರುತ್ತಿದ್ದ ಆರೋಪಿ ತನ್ನ 17 ವರ್ಷದ ಪುತ್ರಿಯನ್ನು ಬೆದರಿಸಿ ಅತ್ಯಾಚಾರ ಎಸಗುತ್ತಿದ್ದ. ಪದೇಪದೇ ಅತ್ಯಾಚಾರ ಎಸಗಿದ್ದು ಗರ್ಭಿಣಿಯಾಗಿದ್ದ ಬಾಲಕಿ ಅಜ್ಜಿ ಮನೆಗೆ ವಾಪಸ್ ತೆರಳಿದ್ದಳು. ಇದಾದ ನಂತರ ಜನವರಿ 11 ರಂದು ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಬಗ್ಗೆ ಮಾಹಿತಿ ತಿಳಿದ ಜಿಲ್ಲಾ ಮಕ್ಕಳ ಕಲ್ಯಾಣ ಕಚೇರಿ ಅಧಿಕಾರಿಗಳು ಹುಡುಗಿಯನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೋವಿಡ್-ಸೋಂಕಿತ ಬಾವಲಿಗಳಿಂದ ಕಚ್ಚಲ್ಪಟ್ಟದ್ದನ್ನು ಒಪ್ಪಿಕೊಂಡ ವುಹಾನ್ ಲ್ಯಾಬ್ ವಿಜ್ಞಾನಿಗಳು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








