2020ರಲ್ಲಿ ಚೀನಾ ಜಿಡಿಪಿ ಬೆಳವಣಿಗೆ 4 ದಶಕಗಳಲ್ಲೇ ಅತ್ಯಂತ ಕಡಿಮೆ
ಚೀನಾ: 2020ರಲ್ಲಿ ಚೀನಾದ ಆರ್ಥಿಕತೆ ಕಳೆದ ನಾಲ್ಕು ದಶಕದಲ್ಲಿಯೇ ಅತ್ಯಂತ ನಿಧಾನಗತಿಯಲ್ಲಿ ಬೆಳೆದಿದೆ ಎಂದು ಅಧಿಕೃತ ಅಂಕಿ-ಅಂಶಗಳು ಬಹಿರಂಗಪಡಿಸಿವೆ. ಚೀನಾದಲ್ಲಿ ಜನಿಸಿದ ಕೊರೊನಾವೈರಸ್ ಎಫೆಕ್ಟ್, ಲಾಕ್ ಡೌನ್, ವಿಶ್ವದಾದ್ಯಂತ ಕೊರೊನಾ ಪರಿಣಾಮದಿಂದಾಗಿ ಈ ಬೆಳವಣಿಗೆಯಾಗಿದೆ ಎಂದು ಹೇಳಲಾಗಿದೆ. ಇನ್ನೂ 1970ರ ದಶಕದಲ್ಲಿ ಚೀನಾದಲ್ಲಿ ಪ್ರಮುಖ ಆರ್ಥಿಕ ಸುಧಾರಣೆ ಕಂಡುಬಂದಿತ್ತು. ಆ ನಂತರದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಪ್ರಮಾಣದ, ಅಂದರೆ 2.3% ವಿಸ್ತರಣೆ ಆಗಿದೆ ಎಂದು ಸೋಮವಾರ ಅಧಿಕೃತ ದತ್ತಾಂಶಗಳಿಂದ ಗೊತ್ತಾಗಿದೆ.
ಈತ ತಂದೆ ಅಲ್ಲ… ರಾಕ್ಷಸ : ನಿರಂತರ ಮಗಳ ಮೇಲೆಯೇ ಅತ್ಯಾಚಾರ, ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ..!
ಕೊರೊನಾದ ಪ್ರಭಾವ ಭಾರೀ ಮಟ್ಟದಲ್ಲಿ ಆಗುವುದರಿಂದ ದೇಶೀ ಹಾಗೂ ವಿದೇಶೀ ಎರಡೂ ಕಡೆ ಭೀಕರ ಮತ್ತು ಸಂಕೀರ್ಣ ಸ್ಥಿತಿ ಎದುರಿಸಬೇಕಾಗುತ್ತದೆ ಎಂದು ನ್ಯಾಷನಲ್ ಬ್ಯುರೋ ಆಫ್ ಸ್ಟಾಟಿಸ್ಟಿಕ್ಸ್ ಎಚ್ಚರಿಕೆಯನ್ನು ನೀಡಿದೆ. 1990ರಲ್ಲಿ ದಾಖಲಿಸಿದ್ದ 3.9% ಈಚಿನ ಅತ್ಯಂತ ಕಡಿಮೆ ಪ್ರಮಾಣದ ಬೆಳವಣಿಗೆ ಆಗಿತ್ತು. ಆಗಲೂ ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಇತರ ಪ್ರಮುಖ ಆರ್ಥಿಕತೆಗಳಿಗಿಂತ ಮುಂದಿತ್ತು.
ಈಗಿನ ಸ್ಥಿತಿ ನೋಡಿದರೆ ಅಲ್ಲಿನ ವ್ಯಾಪಾರ- ಉದ್ಯಮ ಸಹಜ ಸ್ಥಿತಿಗೆ ಮರಳಿದಂತಿದೆ. ಚೀನಾ ಮೇಡ್ ಮಾಸ್ಕ್ ಗಳು, ವೈದ್ಯಕೀಯ ಸಲಕರಣೆಗಳಿಗೆ ಬೇಡಿಕೆ ಇದ್ದುದರಿಂದ ಬೆಳವಣಿಗೆ ಕಂಡುಬಂದಿದೆ. ಕೊರೊನಾ ನಿಯಂತ್ರಣಕ್ಕಾಗಿ ಘೋಷಿಸಿದ್ದ ಲಾಕ್ ಡೌನ್ ಪರಿಣಾಮವು ಚೀನಾದ ಆರ್ಥಿಕತೆ ಮೇಲೆ ಬೀರಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel