ವರ್ಕ್ ಫ್ರಂ ಹೋಂ ಉದ್ಯೋಗಿಗಳ ವೇತನ ಕಡಿತಕ್ಕೆ ಮುಂದಾದ ಕಂಪನಿಗಳು ?
ಹೊಸದಿಲ್ಲಿ, ಜನವರಿ20: ಕೋವಿಡ್ ಸಾಂಕ್ರಾಮಿಕದ ನಡುವೆ ವರ್ಕ್ ಫ್ರಂ ಹೋಂ ಪರಿಚಯಿಸಿದ ನಂತರ ಸಣ್ಣ ಪಟ್ಟಣಕ್ಕೆ ತೆರಳಿದ ಉದ್ಯೋಗಿಗಳಿಗೆ, ವೇತನ ಕಡಿತಕ್ಕೆ ಕಂಪನಿಗಳು ಸಿದ್ದತೆ ನಡೆಸಿದೆ.

ಸೇವಾ ಕ್ಷೇತ್ರಗಳಲ್ಲಿನ ಕಂಪನಿಗಳು ಮೆಟ್ರೋಗಳು ಮತ್ತು ಶ್ರೇಣಿ -1 ನಗರಗಳಿಂದ ಸಣ್ಣ ಪಟ್ಟಣಗಳಿಗೆ ಹೋಗಲು ಆಯ್ಕೆ ಮಾಡಿದ ನೌಕರರ ವೇತನ ಕಡಿತದ ಬಗ್ಗೆ ಮೌಲ್ಯಮಾಪನ ಮಾಡಲು ಪ್ರಾರಂಭಿಸಿವೆ. ಸೇವಾ ವಲಯದ ಕೆಲಸದ ಬಗ್ಗೆ ಕಾರ್ಮಿಕ ಸಚಿವಾಲಯದ ಕರಡು ನಿಯಮಗಳ ಬಗ್ಗೆ ಚರ್ಚೆಗಳು ಪ್ರಾರಂಭವಾಗಿದೆ ಎಂದು ವರದಿಗಳು ತಿಳಿಸಿದೆ.
ಮುಖ್ಯವಾಗಿ ಐಟಿ / ಐಟಿಇಎಸ್, ಹಣಕಾಸು ಸೇವೆಗಳು ಮತ್ತು ವೃತ್ತಿಪರ ಸೇವೆಗಳಲ್ಲಿನ ಉದ್ಯೋಗಿಗಳ ವೇತನ ಕಡಿತಕ್ಕೆ ಸಿದ್ಧತೆಗಳು ನಡೆದಿವೆ.
ಅರ್ನಬ್ – ಪಾರ್ಥೋ ದಾಸ್ ನಡುವಿನ ಸಂಭಾಷಣೆ – ಮೋದಿ ಸರ್ಕಾರದ ಮೇಲೆ ಇಮ್ರಾನ್ ಖಾನ್ ಆಕ್ರೋಶ
ಸೇವಾ ವಲಯಕ್ಕೆ ವರ್ಕ್ ಫ್ರಂ ಹೋಂ ಪರಿಕಲ್ಪನೆಯಿಂದ ಕೆಲಸವನ್ನು ಔಪಚಾರಿಕಗೊಳಿಸುವ ಕರಡು ಕುರಿತು ಕಾರ್ಮಿಕ ಸಚಿವಾಲಯವು ಅಭಿಪ್ರಾಯಗಳನ್ನು ಕೋರಿದೆ. ಹೊಸ ನಿಯಮಗಳ ಪ್ರಕಾರ, ಕೆಲವು ವರ್ಕ್ ಫ್ರಂ ಹೋಂ ಉದ್ಯೋಗಿಗಳಿಗೆ ವೇತನ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ವರ್ಕ್ ಫ್ರಂ ಹೋಂ ಅನ್ನು ಮುಂದುವರೆಸಿದವರು ಆದರೆ ಅಸ್ತಿತ್ವದಲ್ಲಿರುವ ಸ್ಥಳವನ್ನು ಬಿಟ್ಟು ಹೋಗದವರು ಒಟ್ಟಾರೆ ಸಂಬಳದಲ್ಲಿ ಯಾವುದೇ ಕಡಿತವಿಲ್ಲದೆ ಭತ್ಯೆ ಘಟಕಗಳಲ್ಲಿ ಬದಲಾವಣೆಯನ್ನು ಕಾಣಬಹುದು. ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವೈಫೈ ಮತ್ತು ಇತರ ಮೂಲಸೌಕರ್ಯ ವೆಚ್ಚಗಳನ್ನು ಒಳಗೊಂಡಂತೆ ಹೊಸ ಘಟಕಗಳನ್ನು ಮರುಪಾವತಿ ಮಾಡಲು ಪ್ರಾರಂಭಿಸಬಹುದು ಮತ್ತು ಸಾರಿಗೆಯಂತಹ ಭತ್ಯೆಗಳನ್ನು ತೆಗೆದುಹಾಕಬಹುದು ಎಂದು ತಜ್ಞರು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
https://twitter.com/SaakshaTv/status/1350836625282981890?s=19
https://twitter.com/SaakshaTv/status/1351192252895408133?s=19








