ತನ್ನ ಗಂಡ ‘ಅವನಲ್ಲ ಅವಳು’ ಎಂದು ಗೊತ್ತಾಯ್ತು…. ಮುಂದೇನಾಯ್ತು..!
ಮಹಿಳೆಯೊಬ್ಬಳು ತನ್ನನ್ನು ಗಂಡಸೆಂದು ಬಿಂಬಿಸಿಕೊಂಡು ವಿಧವೆಯೊಬ್ಬಳನ್ನು ಮದುವೆಯಾಗಿ ಸುಮಾರು 7 ತಿಂಗಳ ಕಾಲ ಸಂಸಾರವನ್ನೂ ನಡೆಸಿದ್ದಾಳೆ. ಬಳಿಕ ವಿಧವೆಯ ಬಳಿ ಇದ್ದ 1.5 ಲಕ್ಷ ರೂ. ನಗದು ಹಾಗೂ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿ ಆಗಿದ್ದಾಳೆ. ಇನ್ನೂ ಈ ಬಗ್ಗೆ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ ಬಳಿಕ ಪೊಲೀಸರು ಆರೋಪಿಯನ್ನ ಬಂಧಿಸಿದ ವೇಳೆಯೇ ಆಕೆಗೆ ಆಘಾತಕಾರಿ ವಿಚಾರ ಗೊತ್ತಾಗಿದೆ. ಬಂಧನಕ್ಕೆ ಒಳಗಾದಾಗಲೇ ಆಕೆ ಮದುವೆಯಾಗಿದ್ದು ಪುರುಷನನ್ನ ಅಲ್ಲ ಮಹಿಳೆಯನ್ನ ಅನ್ನೋದು ತಿಳಿದಿದೆ.
ರಾಜಸ್ಥಾನದ ಜೈಪುರದ ಕೋಟದಲ್ಲಿನ 30 ವರ್ಷದ ಸಂತ್ರಸ್ತ ಮಹಿಳೆಯ ಗಂಡ 4 ವರ್ಷದ ಹಿಂದೆ ತೀರಿಹೋಗಿದ್ದ. 1 ವರ್ಷದ ಹಿಂದೆ ಕೋಟದ ನಾರಿಶಾಲಾ ಎಂಬ ಮಹಿಳಾ ಆಶ್ರಮಕ್ಕೆ ತನ್ನ ಇಬ್ಬರು ಮಕ್ಕಳೊಂದಿಗೆ ಬಂದಿದ್ದ ಸಂತ್ರಸ್ತೆ, ಅಲ್ಲಿ ಭದ್ರತಾ ಸಿಬ್ಬಂದಿಯ ಕೆಲಸ ಮಾಡುತ್ತಿದ್ದಳು. ಅದೇ ಸಮಯದಲ್ಲಿ ಅಲ್ಲಿ 32 ವರ್ಷದ ವಿಜೇತ ಎಂಬ ಹೆಸರಿನ ಆರೋಪಿ ವಿಕಾಸ್ ಎಂಬ ಹೆಸರಿನಲ್ಲಿ ಬಂದು ಸೇರಿಕೊಂಡು ತಾನು ಗಂಡಸೆಂದು ಬಿಂಬಿಸಿಕೊಂಡಿದ್ದ.
17 ವರ್ಷದ ಯುವತಿ ಮೇಲೆ 38 ಜನರಿಂದ ನಿರಂತರ ಅತ್ಯಚಾರ : ಕಣ್ಣಲ್ಲಿ ನೀರು ತರಿಸುತ್ತೆ ಈ ಯುವತಿಯ ಕಥೆ..!
ಅಲ್ಲದೇ ವಿಜೇತ ಒಂದು ಹುಡುಗಿಯೊಂದಿಗೆ ಇದ್ದು, ಆಕೆಯನ್ನು ತನ್ನ ಮಗಳೆಂದು ಹೇಳಿಕೊಂಡಿದ್ದಳು. ಅಲ್ಲದೇ ಪೊಲೀಸರು ತನ್ನನ್ನು ಇಲ್ಲಿಗೆ ಮಹಿಳೆ ಎಂದು ತಪ್ಪಾಗಿ ಕಳಿಸಿದ್ದಾರೆ. ನಾನು ಪುರುಷ ಎಂದು ಪರಿಚಯಿಸಿಕೊಂಡಿದ್ದ ವಿಜೇತ, ಆ ನಂತರ ಸಂತ್ರಸ್ತೆಯನ್ನು ಮನವೊಲಿಸಿ ಮದುವೆಯಾಗಿದ್ದಳು. ನೋಡಲು ಬೇರೆ ಹುಡುಗನ ರೀತಿಯೇ ಇದ್ದು, ಧ್ವನಿಯೂ ಪುರುಷರಂತೆಯೇ ಇದ್ದ ಕಾರಣ ವಿಜೇತಾಳ ಮೇಲೆ ಅನುಮಾನ ಬಂದಿರಲಿಲ್ಲ. ಏಳು ತಿಂಗಳ ಕಾಲ ಇಬ್ಬರೂ ಜೊತೆಗಿದ್ದರೂ ಲೈಂಗಿಕ ಸಂಪರ್ಕ ಆಗಿರಲಿಲ್ಲ. ತನನ್ನು ಬೆತ್ತಲೆಯಾಗಿ ನೋಡಿದವರು ಸತ್ತು ಹೋಗುತ್ತಾರೆ ಎಂದು ಮಂತ್ರವಾದಿಯೊಬ್ಬರು ಹೇಳಿದ್ದಾರೆ ಎಂದು ಹೆದರಿಸಿದ್ದಳು. ಈಕೆಯ ಮಾತನ್ನ ಸಂತ್ರಸ್ತ ಮಹಿಳೆ ನಂಬಿದ್ದಳು. ಹೀಗೆ 7 ತಿಂಗಳ ನಂತರ ಹಣ – ಚಿನ್ನಾಭರಣ ದೋಚಿ ವಿಜೇತ ಎಸ್ಕೇಪ್ ಆಗಿದ್ದಳು.
ಈ ಬಗ್ಗೆ ಸಂತ್ರಸ್ತೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ, ತನ್ನ ಎರಡನೇ ಗಂಡ ಮನೆಯಲ್ಲಿರುವ ಹಣ-ಆಭರಣ ದೋಚಿಕೊಂಡು ಪರಾರಿಯಾಗಿದ್ದಾನೆ ಎಂದು ದೂರು ಕೊಟ್ಟಿದ್ದಳು. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಂಧಿತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಹಿಳೆ ಎಂಬುದು ದೃಢಪಟ್ಟಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel