ಹೈದರಾಬಾದ್ | ಕೋವಿಡ್ ಲಸಿಕೆ ಪಡೆದ ಆರೋಗ್ಯ ಸಿಬ್ಬಂದಿ ಸಾವು
ಹೈದರಾಬಾದ್ : ದೇಶದಾದ್ಯಂತ ಕೊರೊನಾ ಲಸಿಕೆ ವಿತರಣಾ ಕಾರ್ಯಕ್ರಮ ಬಿರುಸಿನಿಂದ ಸಾಗಿದ್ದು, ತೆಲಂಗಾಣದಲ್ಲಿ ಲಸಿಕೆ ಪಡೆದ 18 ಗಂಟೆಗಳಲ್ಲೇ ಆರೋಗ್ಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಈ ಬಗ್ಗೆ ತೆಲಂಗಾಣ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ನಿರ್ಮಲ್ ಮೂಲದ ಆರೋಗ್ಯ ಸಿಬ್ಬಂದಿಗೆ ನಿನ್ನೆ ಬೆಳಗ್ಗೆ 11.30ಕ್ಕೆ ಕುಂತಲದಲ್ಲಿರುವ ಪಿಎಚ್ ಸಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ನೀಡಲಾಗಿದ್ದು, ನಿನ್ನೆ ರಾತ್ರಿ ಅವರಿಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದೆ.
ಕೂಡಲೇ ಅವರನ್ನು ನಿರ್ಮಲ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇಂದು ಬೆಳಗಿನ ಜಾವ 5.30ಕ್ಕೆ ಅವರು ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತೆಲಂಗಾಣ ಆರೋಗ್ಯ ಇಲಾಖೆ, ಮಾರ್ಗಸೂಚಿ ಪ್ರಕಾರ ವೈದ್ಯರ ತಂಡದಿಂದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು.
ಪ್ರಾಥಮಿಕ ವರದಿಗಳ ಅನ್ವಯ ಲಸಿಕೆಗೂ ಆರೋಗ್ಯ ಸಿಬ್ಬಂದಿ ಸಾವಿಗೂ ಸಂಬಂಧವಿಲ್ಲ ಎಂದೂ ಸ್ಪಷ್ಟನೆ ನೀಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel