ಎಲ್ಲರನ್ನು ತೃಪ್ತಿಪಡಿಸಲು ದೇವರಿಂದಲೂ ಸಾಧ್ಯವಿಲ್ಲ : ಆರ್.ಅಶೋಕ್
ಬೆಂಗಳೂರು : ಖಾತೆ ಹಂಚಿಕೆ ಬೆನ್ನಲ್ಲೆ ರಾಜ್ಯ ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಫೋಟಗೊಂಡಿದ್ದು, ಈ ಬಗ್ಗೆ ಸಚಿವ ಆರ್.ಅಶೋಕ್ “ರಾಜಕಾರಣದಲ್ಲಿ ಖಾತೆ ಕ್ಯಾತೆ ಸರ್ವೇ ಸಾಮಾನ್ಯ. ಎಲ್ಲರನ್ನು ತೃಪ್ತಿಪಡಿಸಲು ದೇವರಿಂದಲೂ ಸಾಧ್ಯವಿಲ್ಲ” ಎಂದಿದ್ದಾರೆ.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಿಎಸ್ ಯಡಿಯೂರಪ್ಪ ಯೋಚಿಸಿ ಖಾತೆ ಹಂಚಿಕೆ ಮಾಡಿದ್ದಾರೆ.
ಅಸಮಾಧಾನಗೊಂಡಿರುವ ಗೋಪಾಲಯ್ಯ, ಎಂಬಿಸಿ ಜತೆನೂ ನಾನು ಮಾತನಾಡಿದ್ದೇನೆ.ಯಡಿಯೂರಪ್ಪನವರ ಮೇಲೆ ಎಲ್ಲಿರಿಗೂ ಭರವಸೆ ಇದೆ.

ಅವರ ಸಮಸ್ಯೆಯನ್ನ ಬೇಗ ಉಪಶಮನ ಮಾಡ್ತಾರೆ. ಮಾಧುಸ್ವಾಮಿಯವರೂ ರಾಜೀನಾಮೆ ನೀಡಿಲ್ಲ.
ಅವರಿಗೂ ಉತ್ತಮ ಖಾತೆ ಸಿಕ್ಕಿದೆ. ಇದು ಸಾಮೂಹಿಕ ನಿರ್ಧಾರ ಆಗಿದೆ. ಇದಕ್ಕೆ ಎಲ್ಲರ ಸಹಮತ ಇದೆ ಎಂದು ಹೇಳಿದರು.
ಗೃಹ ಖಾತೆ ಬಗ್ಗೆ ಮಾತನಾಡಿದ ಅವರು, ಖಾತೆ ಬದಲಾವಣೆ ಸಿಎಂ ಪರಮಾಧಿಕಾರವಾಗಿದೆ.
ಅದನ್ನು ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ. ನಾನು ಯಾವುದೇ ಖಾತೆ ಕ್ಯಾತೆ ತೆಗೆದಿಲ್ಲ. ನಾನು ಗೃಹ ಇಲಾಖೆಯನ್ನೂ ಕೇಳಿಲ್ಲ.
ನಾನು ಖಾತೆ ಬದಲಾವಣೆಗೆ ಕೇಳೇ ಇಲ್ಲ ಎಂದು ಅಶೋಕ್ ಸ್ಪಷ್ಟಪಡಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








