ರಾಮ ಮಂದಿರಕ್ಕೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ ಗೌತಮ್
ನವದೆಹಲಿ : ರಾಮ ಮಂದಿರ ನಿರ್ಮಾಣಕ್ಕಾಗಿ ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಅದ್ಭುತವಾದ ರಾಮ ದೇವಾಲಯ ಎಲ್ಲಾ ಭಾರತೀಯರ ಕನಸಾಗಿದೆ. ದೀರ್ಘಕಾಲದಿಂದ ಇದ್ದ ಸಮಸ್ಯೆ ಅಂತಿಮವಾಗಿ ಬಗೆಹರಿದಿದೆ.
ಇದು ದೇಶದಲ್ಲಿ ಏಕತೆ ಮತ್ತು ಶಾಂತಿಗೆ ದಾರಿ ಮಾಡಿಕೊಡಲಿದೆ. ಈ ಪ್ರಯತ್ನಕ್ಕೆ ನನ್ನ ಮತ್ತು ನನ್ನ ಕುಟುಂಬದಿಂದ ಒಂದು ಸಣ್ಣ ಕೊಡುಗೆಯಾಗಿ ಈ ಹಣ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇನ್ನು ದೆಹಲಿ ಬಿಜೆಪಿ ಘಟಕ ರಾಮಮಂದಿರಕ್ಕಾಗಿ ದೆಹಲಿ ನಗರದಾದ್ಯಂತ ಕೂಪನ್‍ಗಳ ಮೂಲಕ ದೇಣಿಗೆ ಸಂಗ್ರಹಿಸುವ ಅಭಿಯಾನವನ್ನು ಪ್ರಾರಂಭಿಸಿದೆ.
1000ಕ್ಕಿಂತ ಹೆಚ್ಚಿನ ದೇಣಿಗೆ ನೀಡುವವರು ಚೆಕ್ ಗಳ ಮೂಲಕ ನೀಡಬೇಕಾಗುತ್ತದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









