ಮಡಿಕೇರಿ: ಎನ್ಸಿಸಿ ಕರ್ನಾಟಕ ಬೆಟಾಲಿಯನ್ನ ಸಂಯೋಜಿತ ವಾರ್ಷಿಕ ತರಬೇತಿ ಶಿಬಿರ ಮಡಿಕೇರಿಯಲ್ಲಿ ಪೂರ್ಣಗೊಂಡಿದೆ. ಜನವರಿ 17ರಿಂದ 21ರ ವರೆಗೆ ನಡೆದ ತರಬೇತಿ ಶಿಬಿರದಲ್ಲಿ 36ನೇ ಕರ್ನಾಟಕ ಬೆಟಾಲಿಯನ್ ಅಡ್ಮಿನ್ ಆಫೀಸರ್ ಮೇಜರ್ ಶೃತಿ ನಾಯರ್ ಮತ್ತು ಮಹಾವೀರ ಸಿಂಗ್ ಪಾಲ್ಗೊಂಡಿದ್ದರು.

ಎನ್ಸಿಸಿ ಕೆಡೆಟ್ಗಳು ತಮ್ಮ ಜೀವನದಲ್ಲಿ ಶಿಸ್ತಿಗೆ ಮೊದಲ ಆದ್ಯತೆ ನೀಡಬೇಕು. ಎಬಿಸಿ ಸರ್ಟಿಫಿಕೇಟ್ ದೊರೆಯುವಂತಾಗಲು ಪೂರ್ವ ತಯಾರಿಯನ್ನು ಕೆಡೆಟ್ಗಳಿಗೆ ಈ ಶಿಬಿರದಲ್ಲಿ ನೀಡಲಾಗುತ್ತಿದೆ. ಇಂತಹ ಶಿಬಿರಗಳ ಮೂಲಕ ಗಣರಾಜ್ಯೋತ್ಸವ ಪರೇಡನಲ್ಲಿ ಭಾಗವಹಿಸಲು ಶಿಬಿರಾರ್ಥಿಗಳು ಕಠಿಣ ಪ್ರಯತ್ನ ಮಾಡುವಂತಾಗಬೇಕು ಎಂದು ಮೇಜರ್ ಶೃತಿ ನಾಯರ್ ಕಿವಿಮಾತು ಹೇಳಿದರು.

ಶಿಬಿರದಲ್ಲಿ ಸ್ವಚ್ಛತೆ, ನೈರ್ಮಲ್ಯ ಮತ್ತು ಸದೃಢ ಆರೋಗ್ಯದತ್ತ ಗಮನಹರಿಸಬೇಕು. ಶಿಬಿರದಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ ಭಾವನೆಯೊಂದಿಗೆ ಪ್ರತಿಯೊಬ್ಬರನ್ನು ತನ್ನ ಸಹೋದರ-ಸಹೋದರಿ ಎಂಬ ಭಾವನೆ ಇರುವುದರ ಜೊತೆಗೆ ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮೇಜರ್ ಮಹಾವೀರ ಸಿಂಗ್ ಸಲಹೆ ನೀಡಿದರು.

ಜಿ.ಪಿ ಪೋರವಾಲ್ ಮತ್ತು ಎಂ.ಸಿ ಮನಗೂಳಿ ಮಹಾವಿದ್ಯಾಲಯದ ಸುಮಾರು 59 ಎನ್ಸಿಸಿ ಕೆಡೆಟ್ಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಪುರುಷರ ವಿಭಾಗದಲ್ಲಿ 40, ಮಹಿಳೆಯರ ವಿಭಾಗದಲ್ಲಿ 19 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿ ತರಬೇತಿ ಪಡೆದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








