ಹೊಸ ವಿನ್ಯಾಸದ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಗೆ ಎಂಟ್ರಿ… ಏನಿದರ ವಿಶೇಷತೆಗಳು… ಲೈಸೆನ್ಸ್ ಕೂಡ ಬೇಕಾಗಿಲ್ಲ…!
ಭಾರತೀಯ ಎಲೆಕ್ಟ್ರಾನಿಕ್ ಬೈಕ್ ಗಳ ಮಾರುಕಟ್ಟೆಗೆ ಇಂದು ಹೊಸ ವಿನ್ಯಾಸದ ಎಲೆಟ್ರಿಕಲ್ ಬೈಕ್ ಎಂಟ್ರಿ ಕೊಟ್ಟಿದ್ದು, ಬೈಕ್ ಪ್ರಿಯರನ್ನ ಥ್ರಿಲ್ ಗೊಳಿಸಿದೆ. ಹೌದು ಒಕಿನಾವಾ ಕಂಪನಿ ಹೊಸ ಡ್ಯುಯಲ್ ಎಲೆಕ್ಟ್ರಿಕ್ ಸ್ಕೂಟರ್ ನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆಕರ್ಷಕ ವಿನ್ಯಾಸ ಹಾಗೂ ಸದೃಢ ಇಂಜಿನ್ ಸಾಮರ್ಥ್ಯವನ್ನ ಈ ಬೈಕ್ ಹೊಂದಿದ್ದು, ಹೊಸ ಇ ಸ್ಕೂಟರ್ ನ ಬೆಲೆ 58,998 ರೂಪಾಯಿ ಎಂದು ಘೊಷಿಸಿದೆ.
ಅಂದ್ಹಾಗೆ ಇದೊಂದು ಪರಿಸರ ಸ್ನೇಹಿ ಬೈಕ್ ಆಗಿದೆ. ಇದು ಬಿ 2ಬಿ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಈ ಬೈಕ್ನ ಸಹಾಯದಿಂದ ಹೆಚ್ಚಿನ ಸರಕುಗಳನ್ನ ಸಾಗಿಸಬಹುದಾಗಿದೆ. ಅದ್ರಲ್ಲೂ ಫುಡ್ ಡಿಲೆವರಿ ಸೇರಿದಂತೆ ಇತರೇ ಆನ್ ಲೈನ್ ಡಿಲೆವರಿ ಮಾಡುವ ಉದ್ಯಮ ಸಂಸ್ಥೆಯ ಉದ್ಯೋಗಿಗಳಿಗೆ ಇದು ನೆರವಾಗಲಿದೆ. ಈ ಎಲೆಕ್ಟ್ರಿಕ್ ಬೈಕ್ ಒಂದು ಬಾರಿಗೆ 200 ಕೆಜಿ ತೂಕದ ವಸ್ತುಗಳನ್ನ ಹೊರುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ತಿಳಿಸಿದೆ.
ಹೊಸ ಅವತಾರದಲ್ಲಿ ಮಾರುಕಟ್ಟೆಗೆ ‘ರಾಯಲ್ ಎನ್ಫೀಲ್ಡ್’ ರಾಯಲ್ ಆಗಿ ಎಂಟ್ರಿ…!
ಆಕರ್ಷಕ ಕೆಂಪು ಹಾಗೂ ಹಳದಿ ಬಣ್ಣದಲ್ಲಿ ಈ ಬೈಕ್ಗಳು ಲಭ್ಯವಿದೆ. ಬೈಕ್ ಮುಂಬದಿ ಹಾಗೂ ಹಿಬಂದಿಗಳಲ್ಲಿ ಸಾಮಗ್ರಿಗಳನ್ನ ಇಡಲು ನೆರವಾಗುವಂತೆ ಕ್ಯಾರಿಯರ್ ಗಳನ್ನ ಇಡಲಾಗಿದೆ.
250 ವ್ಯಾಟ್ ಎಲೆಕ್ಟ್ರಿಕ್ ಮೋಟರ್ ಗಳನ್ನ ಈ ಬೈಕ್ ಹೊಂದಿದ್ದು ಪ್ರತಿ ಗಂಟೆಗೆ 25 ಕಿಲೋಮೀಟರ್ ಸಾಮರ್ಥ್ಯದಲ್ಲಿ ಚಲಿಸಲಿದೆ. 48 ವ್ಯಾಟ್ ನ ಬ್ಯಾಟರಿ ಕ್ಯಾಪಾಸಿಟಿ ಇದ್ದು ಒಂದು ಗಂಟೆಯಲ್ಲಿ 80 ಪ್ರತಿಶತ ಚಾರ್ಜ್ ಮಾಡಬಹುದಾಗಿದೆ. ಅದಾಗ್ಯೂ ಮತ್ತೊಂದು ಗುಡ್ ನ್ಯೂಸ್ ಅಂದ್ರೆ ಈ ಬೈಕ್ ನ ವೇಗ ಕಡಿಮೆ ಇರೋದ್ರಿಂದ ಲೈಸೆನ್ಸ್ ಹೊಂದಲೇಬೇಕೆಂಬ ಅವಶ್ಯಕತೆ ಇರೋದಿಲ್ಲ.
ಮಿರ್ಜಾಪುರ ವೆಬ್ ಸಿರೀಸ್ ವಿರುದ್ಧ ದೂರು : ಕೇಂದ್ರ ಸರ್ಕಾರ, ಅಮೆಜಾನ್ ಪ್ರೈಮ್ ಗೆ ‘ಸುಪ್ರೀಂ’ ನೋಟೀಸ್ – ಕಾರಣ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








