ಮಹಿಳೆಗೆ ಕಿರುಕುಳ ಕೊಟ್ಟವನಿಗೆ ಹಿಗ್ಗಾ ಮುಗ್ಗಾ ಥಳಿಸಿ ಕೊಂದ ಜನ..!
ಕಾಸರಗೋಡು: ಮಹಿಳೆಗೆ ಕಿರುಕುಳ ಕೊಟ್ಟ ಆರೋಪದಲ್ಲಿ ಜನರ ಗುಂಪೊಂದು ಹಾಡುಹಗಲೇ ಕಿರುಕುಳ ಕೊಟ್ಟ ಕಾಮುಕನನ್ನ ಥಳಿಸಿ ಕೊಂದಿದ್ದಾರೆ. ಈ ಘಟನೆ ಕಾಸರಗೋಡಿನ ಅಶ್ವಿನಿನಗರದ ಆಸ್ಪತ್ರೆ ವಠಾರದಲ್ಲಿ ನಡೆದಿದೆ. ಚೆಮ್ನಾಡ್ ನಿವಾಸಿ 48 ವರ್ಷದ ಮಹಮ್ಮದ್ ರಫೀಕ್ ಕೊಲೆಯಾದ ವ್ಯಕ್ತಿಯಾಗಿದ್ದಾನೆ.
ಮತ್ತೊಬ್ಬಳ ಹಿಂದೆ ಬಿದ್ದ ಪತಿಗೆ ಒಂದು ಗತಿ ಕಾಣಿಸಿದ ಹೆಂಡತಿ : ಅಸಲಿಗೆ ಆಗಿದ್ದೇನು..!
ಮಗುವಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಮಹಿಳೆಗೆ ಈ ರಫೀಕ್ ಕಿರುಕುಳ ನೀಡಿದ. ಇದನ್ನು ವಿರೋಧಿಸಿದ ಆಕೆ ಆತನನ್ನು ಪಕ್ಕಕ್ಕೆ ತಳ್ಳಿದ್ದರು. ಈ ವಿಚಾರವಾಗಿ ರಫೀಕ್ ಹಾಗೂ ತಂಡವೊಂದರ ನಡುವೆ ವಾಗ್ವಾದ ನಡೆದಿತ್ತು. ಇದಾದ ಕೆಲ ಹೊತ್ತಿನಲ್ಲೇ ಆಸ್ಪತ್ರೆ ವಠಾರದ ಮೆಡಿಕಲ್ ಶಾಪ್ ಬಳಿಗೆ ಬಂದ ತಂಡ ಮಹಮ್ಮದ್ ರಫೀಕ್ ನನ್ನು ಥಳಿಸಿದೆ. ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ರಫೀಕ್ ನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ. ಆದ್ರೆ ಅಷ್ಟರಲ್ಲೇ ಆತ ಮೃತಪಟ್ಟಿದ್ದಾಗಿ ತಿಳಿದುಬಂದಿದೆ. ಇತ್ತ ಸ್ಥಳಕ್ಕಾಗಮಿಸಿದ ಡಿವೈಎಸ್‌ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ತಂಡ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಪತಿಯಿಂದ ನಿರಂತರ ಕಿರುಕುಳ… ಡೆತ್ ನೋಟ್ ಬರೆದಿಟ್ಟು ಪತ್ನಿ ಆತ್ಮಹತ್ಯೆ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel