ಹೆಚ್. ವಿಶ್ವನಾಥ್ ಯಾರಿಗೂ ಲೀಡರ್ ಅಲ್ಲ : ಬಿ.ಸಿ.ಪಾಟೀಲ್
ಚಾಮರಾಜನಗರ : ಹೆಚ್. ವಿಶ್ವನಾಥ್ ಯಾರಿಗೂ ಲೀಡರ್ ಅಲ್ಲ. ಯಾರಿಗೂ ಯಾರು ಲೀಡರ್ ಆಗಲಿಕ್ಕೆ ಆಗುವುದಿಲ್ಲ. ಅವರಿಗೆ ಅವರೇ ಲೀಡರ್ ಆಗ್ತಾರೆ ಅಂತ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಎರಡನೇ ದಿನದ ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿರುವ ಅವರು, ಇಂದು ಹರದನಹಳ್ಳಿ, ಅರಕಲವಾಡಿ ಗ್ರಾಮಗಳಿಗೆ ಭೇಟಿ ನೀಡಿದ್ದರು.
ಈ ವೇಳೆ ನನ್ನ ಸ್ನೇಹಿತರು ನನ್ನ ಒಂಟಿ ಮಾಡಿದ್ರು. ಬಾಂಬೆ ಅಲ್ಲಿ ಅವರನ್ನ ನಾನೇ ಲೀಡ್ ಮಾಡಿದ್ದೆ. ಈಗ ನನ್ನ ಒಂಟಿ ಮಾಡಿದ್ದಾರೆ ಎಂಬ ಹೆಚ್ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಬಾಂಬೆಗೆ ತೆರಳಿದ ವೇಳೆ ಯಾರು ಯಾರನ್ನು ಲೀಡ್ ಮಾಡಲಿಲ್ಲ, ವಿಶ್ವನಾಥ್ ಯಾರಿಗೂ ಲೀಡರ್ ಅಲ್ಲ.
ಅವರಿಗೆ ಅವರೇ ಲೀಡರ್, ಯಾರನ್ನ ಯಾರು ಲೀಡರ್ ಮಾಡಲ್ಲ. ಅವರು ದೊಡ್ಡವರು. ಈ ಕುರಿತು ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ವ್ಯಂಗ್ಯವಾಡಿದರು.
ಒಂಟಿ ಮಾಡಿದ್ರು ಎಂಬ ಹೇಳಿಕೆ ಪ್ರತಿಕ್ರಿಯೆ ನೀಡಿ, ವಿಶ್ವನಾಥ್ ಅವರ ಜೊತೆ ನಾವಿದ್ದೇವೆ, ಯಾರೂ ಅವರನ್ನು ಒಬ್ಬಂಟಿ ಮಾಡಿಲ್ಲ.
ಸಚಿವ ಸ್ಥಾನ ನೀಡಲು ಕೋರ್ಟ್ ಆದೇಶದ ತೊಡಕಿದೆ ಅಷ್ಟೇ. ಜಾತಿವಾರು ಲೆಕ್ಕಾಚಾರದಲ್ಲಿ ಸಂಪುಟ ರಚನೆಯಾಗಿಲ್ಲ, ಒಕ್ಕಲಿಗರನ್ನು ಕಡೆಗಣಿಸಿಲ್ಲ.
ಸಂಪುಟದಲ್ಲಿ ಒಕ್ಕಲಿಗರಿಗೆ ಪ್ರಭಾವಿ ಖಾತೆಗಳು ಸಿಕ್ಕಿವೆ ಎಂದು ಸ್ಪಷ್ಟಪಡಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









