ಜನ ಹಣದುಬ್ಬರದಿಂದ ಬಳಲುತ್ತಿದ್ದರೆ, ಮೋದಿ ಸರಕಾರ ತೆರಿಗೆ ಸಂಗ್ರಹದಲ್ಲಿ ಬ್ಯುಸಿಯಾಗಿದೆ: ರಾಹುಲ್ ಗಾಂಧಿ
ಪೆಟ್ರೋಲ್ ಹಾಗೂ ಡೀಸೆಲ್ ದದರ ಗಗನಕ್ಕೇರುತ್ತಿದೆ. ದಿನೇ ದಿನೇ ತೈಲ ದರದಲ್ಲಿ ಏರಿಕೆಯಾಗುತ್ತಲೇ ಇರುವ ಕುರಿತಾಗಿ ಟ್ವೀಟ್ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಮಹಿಳೆಗೆ ಕಿರುಕುಳ ಕೊಟ್ಟವನಿಗೆ ಹಿಗ್ಗಾ ಮುಗ್ಗಾ ಥಳಿಸಿ ಕೊಂದ ಜನ..!
‘ಮೋದಿಜಿ ಜಿಡಿಪಿಯಲ್ಲಿ ಭಾರೀ ಬೆಳವಣಿಗೆಯನ್ನು ತೋರಿಸಿದ್ದಾರೆ. ಆದ್ರೆ ಗ್ಯಾಸ್-ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಏರಿಕೆಯಾಗಿದೆ. ಸಾರ್ವಜನಿಕರು ಹಣದುಬ್ಬರದಿಂದ ಬಳಲುತ್ತಿದ್ದಾರೆ. ಮೋದಿ ಸರಕಾರ ತೆರಿಗೆ ಸಂಗ್ರಹದಲ್ಲಿ ವ್ಯಸ್ತವಾಗಿದೆ’ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
ಈ ವಾರ 4ನೇ ಬಾರಿ ದರಗಳನ್ನು ಹೆಚ್ಚಿಸಿದ ಬಳಿಕ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಸಾರ್ವಜನಿಕ ಹೊಸ ಗರಿಷ್ಠ ಮಟ್ಟಕ್ಕೆ ತಲುಪಿತ್ತು.
ಪೆಟ್ರೋಲ್ ದರ ಈಗ ದಿಲ್ಲಿಯಲ್ಲಿ ಲೀಟರ್ ಗೆ 85.70 ರೂ. ಮುಂಬೈನಲ್ಲಿ ರೂ.92.28 ರೂ. ಇದೆ. ಅದೇ ರೀತಿ ಡೀಸೆಲ್ ದರ ದಿಲ್ಲಿಯಲ್ಲಿ ಲೀಟರ್ ಗೆ 75.88 ರೂ., ಮುಂಬೈನಲ್ಲಿ ಲೀಟರ್ ಗೆ 82.66 ರೂ. ಏರಿಕೆಯಾಗಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel