2021ನೇ ಸಾಲಿನ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿಗೆ ಕರ್ನಾಟಕದ ಇಬ್ಬರು ಸೇರಿ 32 ಬಾಲಪ್ರತಿಭೆಗಳ ಆಯ್ಕೆ
ಹೊಸದಿಲ್ಲಿ, ಜನವರಿ25: 2021 ನೇ ಸಾಲಿನ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿಗೆ ವಿವಿಧ ವಿಭಾಗಗಳಲ್ಲಿ ಸಾಧನೆ ತೋರಿದ 32 ಬಾಲಪ್ರತಿಭೆಗಳನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕದ ಇಬ್ಬರು ಮಕ್ಕಳು ಸೇರಿದಂತೆ 21 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ 32 ಮಕ್ಕಳು ಬಾಲಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ 7, ನವೋನ್ವೇಷಣೆ ವಿಭಾಗದಲ್ಲಿ 9, ಶೈಕ್ಷಣಿಕ ಸಾಧನೆ ವಿಭಾಗದಲ್ಲಿ 5, ಕ್ರೀಡಾ ವಿಭಾಗದಲ್ಲಿ 7, ಶೌರ್ಯ ವಿಭಾಗದಲ್ಲಿ 3, ಸಮಾಜ ಸೇವೆ ವಿಭಾಗದಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗಿದ್ದು, ಪ್ರಧಾನಿ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಬಾಲ ಪುರಸ್ಕಾರಕ್ಕೆ ಆಯ್ಕೆಯಾದವರ ಜೊತೆಗೆ ಮಾತನಾಡಲಿದ್ದಾರೆ.
ದೆಹಲಿ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಕಲಿಯುತ್ತಿರುವ ಬೆಂಗಳೂರಿನ ವೀರ್ ವಿ.ಕಶ್ಯಪ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ರಾಕೇಶ್ ಕೃಷ್ಣ ಕರ್ನಾಟಕದಿಂದ ಬಾಲಪುರಸ್ಕಾರಕ್ಕೆ ಆಯ್ಕೆಯಾಗಿರುವ ಪ್ರತಿಭೆಗಳು.
ಪ್ರಧಾನಿ ಮೋದಿ ತಾಯಿ ಹಿರಾಬೆನ್ ಮೋದಿ ಅವರಿಗೆ ಪಂಜಾಬ್‌ನ ಪ್ರತಿಭಟನಾ ನಿರತ ರೈತರ ಭಾವನಾತ್ಮಕ ಪತ್ರ
ದೆಹಲಿ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಕಲಿಯುತ್ತಿರುವ ಬೆಂಗಳೂರಿನ ವೀರ್ ವಿ.ಕಶ್ಯಪ್ ಕೊರೋನಾ ಲಾಕ್ ಡೌನ್ ಸಮಯದಲ್ಲಿ ಕೊರೋನಾ ನಿಯಮ ಪಾಲನೆ ಮಾಡುವ ಬೋರ್ಡ್ ಗೇಮ್ ಅಭಿವೃದ್ಧಿಪಡಿಸಿದ್ದು, ಆ ಸಾಧನೆಗಾಗಿ ಬಾಲಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಕೊರೋನಾ ಸೋಂಕಿನ ಸಮಯದಲ್ಲಿ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದ ಜಾಗೃತಿ ಕಾರ್ಯಕ್ರಮದಿಂದ ಪ್ರೇರಿತರಾದ ವೀರ್ ವಿ.ಕಶ್ಯಪ್, ಕಾರ್ಡ್ ಬೋರ್ಡ್ ಮೇಲೆ ಕೊರೋನಾ ವೈರಸ್ ವಿಚಾರಗಳ ಚಿತ್ರ ಬಿಡಿಸಿದರು. ಸುಮಾರು 52 ಗುರುತುಗಳನ್ನು ಮಾಡಿ ಆಟಗಾರರನ್ನು ನಿಯೋಜಿಸಿದ ಅವರು ಅದರ ಮೂಲಕ ಆಟವನ್ನು ಪ್ರಾರಂಭಿಸಿದರು.

ಮನೆಯಿಂದ ಆರಂಭವಾಗಿ ಮನೆಯಿಂದಲೇ ಕೊನೆಗೊಳ್ಳುವ ಈ ಆಟದಲ್ಲಿ ಮನೆಯಿಂದ ಹೊರಹೋಗುವ ವ್ಯಕ್ತಿ ಪಾಲಿಸಬೇಕಾದ ಎಲ್ಲಾ ನಿಯಮಗಳಿವೆ. ಈ ಬೋರ್ಡ್ ಗೇಮ್ ಕೊರೋನಾ ಸೋಂಕು ತಡೆಗಟ್ಟಲು ಪಾಲಿಸಬೇಕಾದ ನಿಯಮಗಳ ಜೊತೆಗೆ ರೋಗ ಲಕ್ಷಣಗಳು, ಮುನ್ನೆಚ್ಚರಿಕೆ ಕ್ರಮಗಳು ಮತ್ತು ಕೋವಿಡ್ ಯೋಧರ ಪಟ್ಟಿಯನ್ನು ಹೊಂದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಜ್ವರದ ತಾಪಮಾನವನ್ನು ತ್ವರಿತವಾಗಿ ತಗ್ಗಿಸಲು ಪರಿಣಾಮಕಾರಿ ಮನೆಮದ್ದುhttps://t.co/E7TdVhTNR3
— Saaksha TV (@SaakshaTv) January 22, 2021
ಡೆಬಿಟ್ ಕಾರ್ಡ್ ಬಳಸುವಾಗ ಗಮನಿಸಬೇಕಾದ ಪ್ರಮುಖ ವಿಷಯಗಳುhttps://t.co/f90oDIx0lm
— Saaksha TV (@SaakshaTv) January 22, 2021








