ಕೇಂದ್ರ ಬಜೆಟ್ ನಲ್ಲಿ ದೇಶಿ ಆಟಿಕೆಗಳಿಗೆ ಉತ್ತೇಜನಕ್ಕೆ ವಿಶೇಷ ನೀತಿ ಪ್ರಕಟನೆ ಸಾಧ್ಯತೆ..!
ನವದೆಹಲಿ: ಈ ಬಾರಿಯ ಕೇಂದ್ರ ಬಜೆಟ್ 2021 ಫೆಬ್ರವರಿ 1ರಂದು ಮಂಡನೆಯಾಗಲಿದ್ದು, ಆಟಿಕೆಗಳ ಕ್ಷೇತ್ರಕ್ಕೆ ಸಂಬಂಧಿಸಿ ವಿಶೇಷ ನೀತಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಇದರಿಂದಾಗಿ ದೇಶೀಯ ಆಟಿಕೆಗಳ ಉತ್ಪಾದನೆ ಮತ್ತು ಅವುಗಳ ರಫ್ತಿಗೆ ಹೆಚ್ಚು ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ. ಜತೆಗೆ ಈ ಕ್ಷೇತ್ರದಲ್ಲಿ ಹೊಸ ರೀತಿಯ ಸ್ಟಾರ್ಟಪ್ಗ್ಳನ್ನು ಶುರು ಮಾಡುವವರಿಗೂ ಬೆಂಬಲ ನೀಡಿದಂತಾಗುತ್ತದೆ.
ಹೊಸ ಕಾರು ಖರೀದಿ ನಿಯಮದಲ್ಲಿ ಬದಲಾವಣೆ..!
ಸದ್ಯ ಈ ಕ್ಷೇತ್ರಕ್ಕೆ ಶೇ.0.5ಕ್ಕಿಂತ ಕಡಿಮೆ ಅನುದಾನ ಮೀಸಲಿಡಲಾಗುತ್ತಿದೆ. ದೇಶದಲ್ಲಿ ಆಟಿಕೆ ಉತ್ಪಾದನಾ ಕ್ಷೇತ್ರ ಅಸಂಘಟಿತ ವಲಯದಲ್ಲಿದೆ. ಸುಮಾರು 4 ಸಾವಿರ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳೇ ಹೆಚ್ಚಾಗಿ ಈ ಕ್ಷೇತ್ರದಲ್ಲಿವೆ. ಚೀನಾ, ಶ್ರೀಲಂಕಾ, ಮಲೇಷ್ಯಾ, ಅಮೆರಿಕ, ಹಾಂಕಾಂಗ್, ಜರ್ಮನಿಯಿಂದ ದೇಶಕ್ಕೆ ಆಟಿಕೆಗಳನ್ನು ಆಮದು ಮಾಡಲಾಗುತ್ತದೆ.
2021ನೇ ಸಾಲಿನ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿಗೆ ಕರ್ನಾಟಕದ ಇಬ್ಬರು ಸೇರಿ 32 ಬಾಲಪ್ರತಿಭೆಗಳ ಆಯ್ಕೆ
2020ರಲ್ಲಿ ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವಾಲಯ ವಿದೇಶಿ ಆಟಿಕೆಗಳ ಮೇಲೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಸುಂಕದಲ್ಲಿ ಹೆಚ್ಚಳ ಮಾಡುವ ಪ್ರಸ್ತಾಪ ಮಾಡಿತ್ತು. ಹೀಗಾಗಿ ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಕ್ಷೇತ್ರಕ್ಕೆ ವಿಶೇಷ ನೀತಿ ಪ್ರಕಟಿಸುವ ಸಾಧ್ಯತೆಯಿದೆ ಎನ್ನಲಾಗ್ತಿದೆ.
ಮಗುವನ್ನ ರಕ್ಷಿಸಿದ ಬೆಕ್ಕು : ವಿಡಿಯೋ ವೈರಲ್
ಗಾಲ್ವಾನ್ ಘರ್ಷಣೆಯಲ್ಲಿ ನಲ್ಲಿ ಹುತಾತ್ಮರಾದ ಎಲ್ಲಾ 20 ಯೋಧರಿಗೆ ಈ ಬಾರಿ ಶೌರ್ಯ ಪ್ರಶಸ್ತಿ
ಟ್ರ್ಯಾಕ್ಟರ್ ಪರೇಡ್ ವೇಳೆ ಪ್ರದರ್ಶನಗೊಳ್ಳಲಿದೆ ರೈತರ ಬದುಕು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








