ದಸರಾಗೆ ರೌಧ್ರಂ ರಣಂ ರುಧಿರಂ ಸುನಾಮಿ
ಸ್ವಾತಂತ್ರ್ಯ ಸಮರ ಯೋಧರು ಕೊಮುರಂ ಭೀಮ್ ಆಗಿ ನಂದಮೂರಿ ಯಂಗ್ ಟೈಗರ್, ಅಲ್ಲೂರಿ ಸೀತಾರಾಮರಾಜು ಆಗಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯಿಸುತ್ತಿರುವ ಭಾರಿ ಬಜೆಟ್ ಸಿನಿಮಾ ರೌಧ್ರಂ ರಣಂ ರುಧಿರಂ.
ಈ ಸಿನಿಮಾದಲ್ಲಿ ಟಾಲಿವುಡ್ ನ ಎರಡು ಸಿನಿ ದಿಗ್ಗಜ ಕುಟುಂಬಗಳ ಕುಡಿಗಳು ಒಂದಾಗಿರೋದು ಈ ಚಿತ್ರದ ಬಹು ಮುಖ್ಯ ವಿಶೇಷತೆ.
ಇದರ ಜೊತೆಗೆ ಬಾಹುಬಲಿ ಸೃಷ್ಟಿಕರ್ತ ಎಸ್ ಎಸ್ ರಾಜಮೌಳಿಯ ನಿರ್ದೇಶನ.. ಆರ್ ಆರ್ ಆರ್ ಮೇಲಿನ ನಿರೀಕ್ಷೆಗಳು ಆಕಾಶವನ್ನು ಮುಟ್ಟಿವೆ.
ಈ ಹಿಂದೆ ರಿಲೀಸ್ ಆಗಿದ್ದ ಸಿನಿಮಾದ ಪೋಸ್ಟರ್ ಟೀಸರ್ ಗಳಿಗೆ ಭಾರಿ ರೆಸ್ಪಾನ್ಸ್ ಸಿಕ್ಕಿದ್ದು, ಇದೀಗ ಸಿನಿರಸಿಕರಿಗೆ ಕಿಕ್ ಕೊಡೋ ಸುದ್ದಿಯನ್ನ ಚಿತ್ರ ಯೂನಿಟ್ ಕೊಟ್ಟಿದೆ.
ದಸರಾ ಹಬ್ಬದ ಪ್ರಯುಕ್ತವಾಗಿ ಅಕ್ಟೋಬರ್ 13 ರಂದು ತ್ರಿಬರ್ ಆರ್ ಸಿನಿಮಾವನ್ನು ರಿಲೀಸ್ ಮಾಡೋದಾಗಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.
ಜ್ವಾಲಾಮುಖಿ, ಸುನಾಮಿ ಒಂದಾದರೇ ಹೇಗಿರುತ್ತೆ ಅನ್ನೋದನ್ನ ಮೊದಲ ಬಾರಿ ನೀವು ನೋಡಲಿದ್ದೀರಿ ಎಂದು ರಾಜಮೌಳಿ ಟ್ವಿಟ್ ಮಾಡಿದ್ದಾರೆ.
ಇನ್ನು ಸದ್ಯ ರಿಲೀಸ್ ಆಗಿರುವ ಪೋಸ್ಟರ್ ವಿಚಾರಕ್ಕೆ ಬಂದ್ರೆ ಚರಣ್ ಕುದುರೆ ಮೇಲೆ ಸವಾರಿಮಾಡುತ್ತಿದ್ದರೇ ಬುಲೆಟ್ ನಲ್ಲಿ ಎನ್ ಟಿಆರ್ ಮುನ್ನುಗ್ಗುತ್ತಿದ್ದಾರೆ.
ಆರ್ಆರ್ ಆರ್ ಸಿನಿಮಾದಲ್ಲಿ ಬಾಲಿವುಡ್ನ ಖ್ಯಾತ ನಟಿ ಆಲಿಯಾ ಭಟ್ ನಟಿಸಿದ್ದು, ಅವರ ಜೊತೆ ನಟ ಅಜಯ್ ದೇವಗನ್ ಸಹ ಸಿನಿಮಾದಲ್ಲಿದ್ದಾರೆ.
ವಿದೇಶಿ ನಟಿ ಒಲಿವಾ ಮೋರಿಸ್ ಸಹ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಡಿವಿವಿ ದಾನಯ್ಯ ನಿರ್ಮಿಸಿದ್ದು, ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel