ರೈತರ ಮೇಲೆ ದಾಳಿ ನಡೆಸಿರುವ ಮೋದಿಯಿಂದ ದೇಶ ದುರ್ಬಲವಾಗ್ತಿದೆ: ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಮೋದಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹೌದು ರೈತರ ಮೇಲೆ ದಾಳಿ ನಡೆಸಿರುವ ಪ್ರಧಾನಿ ಮೋದಿ ದೇಶವನ್ನು ದುರ್ಬಲಗೊಳಿಸಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಕಿಡಿಕಾರಿದ್ದಾರೆ.
6ನೇ ಪತ್ನಿ ಲೈಂಗಿಕ ಕ್ರಿಯೆಗೆ ಒಪ್ಪದಕ್ಕೆ, 7ನೇ ಮದುವೆಗೆ ತಯಾರಾದ 63ರ ವೃದ್ಧ..!
ತಮಿಳುನಾಡಿನ ಕರೂರಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ಮೋದಿ ಭಾರತವನ್ನು ದುರ್ಬಲಗೊಳಿಸಿದ್ದಾರೆ. ಬಿಜೆಪಿ- RSS ಸಿದ್ಧಾಂತವು ದೇಶದಾದ್ಯಂತ ದ್ವೇಷ ಹರಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕೇಂದ್ರ ಸರ್ಕಾರವು ನಮ್ಮ ಆರ್ಥಿಕತೆಯನ್ನು ನಾಶಮಾಡಿದೆ. ನಮ್ಮ ಯುವಕರಿಗೆ ಕೆಲಸ ಸಿಗುತ್ತಿಲ್ಲ. ಇದು ನಮ್ಮ ಯುವಕರ ತಪ್ಪಲ್ಲ. ಪ್ರಧಾನಿ ಮೋದಿ ತೆಗೆದುಕೊಂಡ ತಪ್ಪು ನಿರ್ಧಾರಗಳಿಂದ ಈ ಸನ್ನಿವೇಶ ನಿರ್ಮಾಣವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅಧಿಕಾರಾವಧಿಯಲ್ಲಿ ಟ್ರಂಪ್ ಹೇಳಿದ್ದೆಲ್ಲಾ ಬರೀ ಸುಳ್ಳಾ…? ಎಷ್ಟು ಸುಳ್ಳು ಹೇಳಿದ್ದಾರಂತೆ ಗೊತ್ತಾ…!
ಇದೇ ವೇಳೆ ನಮ್ಮ ರೈತರ ಮೇಲೆ ಪ್ರಧಾನಿ ಮೋದಿ ದಾಳಿ ನಡೆಸಿದ್ದಾರೆ. ಭಾರತದ ಕೃಷಿ ಕ್ಷೇತ್ರವನ್ನು ದೊಡ್ಡ ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರಿಸುವ ಸಲುವಾಗಿ ಮೂರು ಹೊಸ ಕಾಯ್ದೆಗಳನ್ನು ತಂದಿದ್ದಾರೆ. ರೈತರು ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೊಸ್ಕರ ನ್ಯಾಯಾಲಯಕ್ಕೆ ಹೋಗಲು ಸಾಧ್ಯವಿಲ್ಲ ಎಂಬುದಾಗಿ ಹೊಸ ಕಾಯ್ದೆಗಳು ಸ್ಪಷ್ಟವಾಗಿ ಹೇಳುತ್ತವೆ ಎಂದು ಟೀಕಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel