ಕೊರೊನಾ ಅವಧಿಯಲ್ಲಿ ಲಕ್ಷಾಂತರ ಮಂದಿ ಬೀದಿಗೆ ಬಂದ್ರೂ… ಭಾರತದ 100 ಬಿಲಿಯನೇರ್ ಗಳ ಆದಾಯದಲ್ಲಿ ಭಾರೀ ಏರಿಕೆ..!
ನವದೆಹಲಿ : ವಿಶ್ವಾದ್ಯಂತ ಕೊರೊನಾ ಹಾವಳಿಯಿಂದಾಗಿ ಬಡಬಗ್ಗರು, ಅಷ್ಟೇ ಯಾಕೆ ಉದ್ಯಮಿಗಳು ಸಹ ನನಷ್ಟ ಅನುಭವಿಸಿದ್ದಾರೆ. ಬಡವರು, ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ಶಿಕ್ಷಕರು, ಸಂಬಳ ಸಿಗದೆ ಪರಾದಡಿದ್ದಾರೆ. ಅನೇಕರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿ ಬೀದಿಗೆ ಬಂದಿದ್ದಾರೆ. ಎಲ್ಲಾ ಉದ್ಯಮಗಳು ನೆಲಕಚ್ಚಿ ಅಪಾರ ಪ್ರಮಾಣದ ನಷ್ಟ ಅನುಭವಿಸಸಿವೆ. ಸುಮಾರು 17 ಲಕ್ಷ ಮಂದಿ ಕೆಲಸ ಕಳೆದುಕೊಂಡಿದ್ದರು. ಲಕ್ಷಾಂತರ ಜನರ ಬದುಕು ಮೂರಾಬಟ್ಟೆಯಾಗಿದೆ. ಆದರೆ ಇಂತಹ ಕಷ್ಟಕರ ಕಾಲದಲ್ಲೂ ನಮ್ಮ ಭಾರತದ 100 ಕೋಟ್ಯಾಧೀಶ್ವರರ ಆದಾಯದಲ್ಲಿ ಬಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಅಂದ್ರೆ ನೀವು ನಂಬ್ಲೇಬೇಕು.
ಹೌದು ಕೊರೊನಾ ಹೆಮ್ಮಾರಿ ಪರಿಣಾಮ ನಮ್ಮ ಶತಕೋಟಿ ಶ್ರೀಮಂತರ ಆರ್ಥಿಕ ಸ್ಥಿತಿ ಮೇಲೆ ಮಾತ್ರ ಪರಿಣಾಮ ಆಗಿಲ್ಲ. ಕೋವಿಡ್-19 ಸಾಂಕ್ರಾಮಿಕ ರೋಗ ವಿಶ್ವಕ್ಕೆ ಅಪ್ಪಳಿಸಿದ ಪರಿಣಾಮ ಪ್ರಪಂಚಾವೇ ಲಾಕ್‍ಡೌನ್ ಆಗಿತ್ತು. ಜಗತಿಕ ಆರ್ಥಿಕ ಸ್ಥಿತಿ ಸ್ತಬ್ಧವಾಗಿತ್ತು. ಬೃಹತ್ ಕಂಪನಿಗಳು ಮುಚ್ಚಲ್ಪಟ್ಟವು. ಆದ್ರೆ ಆರ್ಥಿಕ ಸ್ಥಿತಿ ದುಸ್ಥಿತಿಗೆ ತಲುಪಿದ್ದ ಆ ಅವಧಿ ಪ್ರಭಾವ ಭಾರತೀಯ ಬಿಲಿಯನೇರ್ ಗಳ ಮೇಲೆ ಆಗಿಲ್ಲ ಎಂಬುದಾಗಿ ಆಕ್ಸಫಾಮ್ ವರದಿ ಪ್ರಕಟಿಸಿದೆ.
ಹೌದು ಕಳೆದ ಮಾರ್ಚ್‍ನಿಂದ ಭಾರತದ ಪ್ರಭಾವಶಾಲಿ 100 ಅಗ್ರ ಬಿಲಿಯನೇರ್ ಗಳು ತಮ್ಮ ಆದಾಯವನ್ನು 12,97,822 ಕೋಟಿ ರೂ.ಗಳಷ್ಟು ಹೆಚ್ಚಿಸಿದ್ದಾರೆ ಎಂದು ತಿಳಿಸಿದೆ. ಇದು ಸುಮಾರು 138 ಕೋಟಿ ಬಡ ಭಾರತೀಯ ಪ್ರಜೆಗಳಿಗೆ ತಲಾ 94,045 ರೂ.ನಂತೆ ಹಂಚಬಹುದಾಗಿದೆ. ದಾವೋಸ್‍ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಫೋರಂನ ಮೊದಲ ದಿನದ ಅಧಿವೇಶನದಲ್ಲಿ ಆಕ್ಸಫಾಮ್ ಈ ವರದಿ ಬಿಡುಗಡೆ ಮಾಡಿದ್ದು, ಕೊರೊನಾ ವೈರಸ್ ಸಾಂಕ್ರಾಮಿಕ ಶತಮಾನದ ಅತಿ ದೊಡ್ಡ ದುಸ್ಥಿತಿಗೆ ಕಾರಣವಾಗಿದೆ.
ಈ ಶತಕೋಟಿ ಒಡೆಯರ ಆದಾಯ ಕಳೆದ ಮಾರ್ಚ್‍ನಿಂದ ಇಲ್ಲಿಯವರೆಗೆ 12 ಲಕ್ಷ 97 ಸಾವಿರದ 822 ಕೋಟಿ ರೂ.ಗಳಿಗೆ ಏರಿಕೆಯಾಗಿ ವಿಶ್ವವನ್ನು ಬೆರಗುಗೊಳಿಸಿದೆ. ಈ ಹಣ 138 ಕೋಟಿ ಭಾರತೀಯರಿಗೆ ತಲಾ 94,045 ರೂ.ಗಳಂತೆ ನೀಡಬಹುದಾಗಿದೆ ಎಂದು ಅಕ್ಸಫಾಮ್ ಹೇಳಿದೆ. ಅಲ್ಲದೆ, 79 ದೇಶಗಳ 295 ನಿಯೋಜಿತ ಆರ್ಥಿಕತಜ್ಞರು ಜಾಗತಿಕ ಸಮೀಕ್ಷೆ ನಡೆಸಿ ವರದಿ ನೀಡಿದ್ದಾರೆ ಎಂದಿದೆ.
ಹಾಗಾದ್ರೆ ಆ ಬಿಲೇನಿಯರ್ಸ್ ಗಳು ಯಾರು..!
2020 ಮಾರ್ಚ್‍ನಲ್ಲಿ ಘೋಷಿಸಿದ ಕೊರೊನಾ ಲಾಕ್‍ಡೌನ್ ಅವಧಿಯಲ್ಲಿ ಅದಿರು, ತೈಲ, ಟೆಲಿಕಾಂ, ಔಷಧ, ಶಿಕ್ಷಣ ಮತ್ತು ರಿಟೈಲ್ ಉದ್ಯಮಗಳಲ್ಲಿ ಆರ್ಥಿಕತೆ ಸ್ತಬ್ಧವಾಗಿದ್ದರೂ ಲಕ್ಷಾಂತರ ಕೋಟಿ ರೂ. ಆದಾಯ ಗಳಿಸಿದ್ದಾರೆ. ಮುಕೇಶ್ ಅಂಬಾನಿ, ಸೈರಸ್ ಪೂನಾವಾಲ, ಶಿವ್ ನಾಡರ್, ಉದಯ್ ಕೊಟಕ್, ಗೌತಮ್ ಅದಾನಿ, ಸುನಿಲ್ ಮಿಟ್ಟಲ್, ಅಜೀಂ ಪ್ರೇಮ್‍ಜಿ, ಕುಮಾರ್ ಮಂಗಳಂ ಬಿರ್ಲಾ , ಲಕ್ಷ್ಮೀ ಮಿಟ್ಟಲ್ ,ರಾಧಾಕೃಷ್ಣ ದಮಾನಿ ಸೇರಿದಂತೆ 100 ಬಿಲಿಯನೇರ್ ಗಳು ಈ ಲಿಸ್ಟ್ ನಲ್ಲಿದ್ದಾರೆ.
ಕಣಿವೆನಾಡು ಕಾಶ್ಮೀರದಲ್ಲಿ ಇಂದು ಇಂಟರ್ನೆಟ್ ಸೇವೆ ಸ್ಥಗಿತ..!
ಡೂಡಲ್ ನಲ್ಲಿ ಭಾರತದ ಏಕತೆಯ ಪರಂಪರೆ ಅನಾವರಣ
ಕಣಿವೆನಾಡು ಕಾಶ್ಮೀರದಲ್ಲಿ ಇಂದು ಇಂಟರ್ನೆಟ್ ಸೇವೆ ಸ್ಥಗಿತ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel