ಗಣರಾಜ್ಯೋತ್ಸವ ಸಮಾರಂಭದಲ್ಲಿ ‘ರಾಜರುಮಾಲು’ ಧರಿಸಿದ ಪ್ರಧಾನಿ ಮೋದಿ..!
ನವದೆಹಲಿ: 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಇಂದು ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ನ ಜಾಮ್ ನಗರದ ವಿಶೇಷ ‘ರಾಜರುಮಾಲು’ ಧರಿಸಿ ಗಮನಸೆಳೆದರು. ಈ ಮೂಲಕ ಪ್ರಮುಖ ಕಾರ್ಯಕ್ರಮಗಳಲ್ಲಿ ವಿಭಿನ್ನ ರುಮಾಲುಗಳನ್ನು ಧರಿಸುವ ತಮ್ಮ ಸಂಪ್ರದಾಯ ಮುಂದುವರಿಸಿದರು.
ಬೆಂಗಳೂರಿನಲ್ಲೂ ಜೋರಾದ ಅನ್ನದಾತರ ಹೋರಾಟ: ಟ್ರ್ಯಾಕ್ಟರ್ ಏರಿ ಬಂದ ರೈತರು
‘ಹಲರಿ ಪಗಡಿ’ ರಾಜರುಮಾಲು ಎಂದು ಹೇಳಲಾಗುವ ಈ ರುಮಾಲು ಕೆಂಪು ಬಣ್ಣದ ವಸ್ತ್ರದಲ್ಲಿ ಹಳದಿ ಬಣ್ಣದ ಚುಕ್ಕೆಗಳ ವರ್ಣ ಸಂಯೋಜನೆಯನ್ನು ಹೊಂದಿದೆ. ಇದನ್ನು ಪ್ರಧಾನಿಗೆ ಜಾಮ್ ನಗರದ ರಾಜಮನೆತನದವರು ಕೊಡುಗೆ ನೀಡಿದ್ದರು.
ರಣಾಂಗಣವಾದ ರಾಷ್ಟ್ರ ರಾಜಧಾನಿ: ದೆಹಲಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ..!
ಜಾಮ್ ನಗರ ಕ್ಷೇತ್ರದ ಸಂಸದೆ ಪೂನಬೆನ್ ಅವರು ಈ ಕುರಿತು ಟ್ವೀಟ್ ಮಾಡಿದ್ದು, ರುಮಾಲು ಈ ಭಾಗದ ಶ್ರೀಮಂತ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಹೇಳಿದ್ದಾರೆ. ಜಾಮ್ ನಗರ ಶ್ರೀಮಂತ ಸಂಸ್ಕೃತಿ ಹೊಂದಿದೆ. ಪ್ರಧಾನಿ ಈ ಭಾಗದ ರಾಜರುಮಾಲು ಧರಿಸಿದ್ದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.
ರಣಾಂಗಣವಾಯ್ತು ರಾಷ್ಟ್ರ ರಾಜದಾನಿ : ಕೆಂಪುಕೋಟೆ ಪ್ರವೇಶಿಸಿ ಧ್ವಜ ಹಾರಿಸಿದ ರೈತರು : video
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel