ಜಾರ್ಖಂಡ್ ಸಿಎಂ ಸೊರೇನ್ ವಿರುದ್ಧ ಅತ್ಯಾಚಾರ ಆರೋಪ: ಅರ್ಜಿ ವಾಪಸ್ ಗೆ ಬಾಂಬೆ ಹೈ ಕೋರ್ಟ್ ನಕಾರ..!
ಮುಂಬೈ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪದಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿಯನ್ನ ಹಿಂಪಡೆಯಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಗಿ ಭದ್ರತೆ ನಡುವೆ ಶಾಂತಿಯುತ ಗಣರಾಜ್ಯೋತ್ಸವ ಆಚರಣೆ
ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ, ಮನೀಷ್ ಪಿತಾಲೆ ಅವರನ್ನೊಳಗೊಂಡ ಪೀಠವು, ಫೆ. 18ರಂದು ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಲಿದೆ ಎಂದು ತಿಳಿಸಿದೆ.
ಆಕ್ಸೆಂಚರ್ ಅನ್ನು ಹಿಂದಿಕ್ಕಿದ TCS… ಈಗ ಇದು ನಂ 1 ಟಾಪ್ ಐ.ಟಿ ಕಂಪನಿ…!
ಹೇಮಂತ್ ಸೊರೇನ್ ಅವರು ಮುಂಬೈನ ಹೋಟೆಲೊಂದರಲ್ಲಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ 2013ರಲ್ಲಿ ಅರ್ಜಿದಾರ ಮಹಿಳೆ ಮೆಟ್ರೊಪಾಲಿಟನ್ ನ್ಯಾಯಾಲಯದ ಮೊರೆ ಹೋಗಿದ್ದರು. ಅದೇ ವರ್ಷ ಬಾಂದ್ರಾ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗೆ ಬರುವ ಮುನ್ನವೇ ಆ ಮಹಿಳೆ ಅರ್ಜಿ ವಾಪಸ್ ಪಡೆಯಲು ಮನವಿ ಸಲ್ಲಿಸಿದ್ದರು. ಆಗ ಕೋರ್ಟ್ ಅರ್ಜಿ ಹಿಂಪಡೆಯಲು ಅನುಮತಿ ನೀಡಿತ್ತು.
ಬೆಂಗಳೂರಿನಲ್ಲೂ ಜೋರಾದ ಅನ್ನದಾತರ ಹೋರಾಟ: ಟ್ರ್ಯಾಕ್ಟರ್ ಏರಿ ಬಂದ ರೈತರು
2020ರ ಆಗಸ್ಟ್ನಲ್ಲಿ ಅರ್ಜಿದಾರ ಮಹಿಳೆಗೆ ಅಪಘಾತವಾಗಿತ್ತು. ಈ ಅಪಘಾತದ ಹಿಂದೆ ಹೇಮಂತ್ ಸೊರೇನ್ ಕೈವಾಡವಿರಬಹುದೆಂದು ಶಂಕಿಸಿ ಮಹಿಳೆ ಹೇಮಂತ್ ವಿರುದ್ಧ FIR ದಾಖಲಿಸಿದ್ದರು. ಬಾಂಬೆ ಹೈಕೋರ್ಟ್ನಲ್ಲಿ ಪ್ರಕರಣವಿರುವಾಗಲೇ ಮಹಿಳೆ ತನ್ನ ವಕೀಲರನ್ನು ಬದಲಾಯಿಸಲು ಕೋರಿದ್ದರು.
ವಿದೇಶಿ ನೆಲದ ಆಕಾಶದೆತ್ತರದಲ್ಲಿ ರಾರಾಜಿಸಿದ ಭಾರತದ ರಾಷ್ಟ್ರ ಧ್ವಜ..!
ಹೊಸ ವಕೀಲರ ಮೂಲಕ ಅತ್ಯಾಚಾರ ಆರೋಪ ಹಿಂಪಡೆಯಲು ಮಹಿಳೆ ಮನವಿ ಸಲ್ಲಿಸಿದ್ದರು. ಆದರೆ, ಇದೀಗ ಅರ್ಜಿ ಹಿಂಪಡೆಯಲು ಅನುಮತಿ ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಈ ನಡುವೆ ಅರ್ಜಿ ಹಿಂಪಡೆಯಬಾರದು ಎಂದು ಕೋರಿ ನ್ಯಾಯಾಲಯಕ್ಕೆ ಪತ್ರಕರ್ತ ಸುನೀಲ್ ಕುಮಾರ್ ತಿವಾರಿ ಹಾಗೂ ಸ್ತ್ರೀ ರೋಷನಿ ಟ್ರಸ್ಟ್ ಅರ್ಜಿ ಸಲ್ಲಿಸಿವೆ.
ಗಣರಾಜ್ಯೋತ್ಸವ ಸಮಾರಂಭದಲ್ಲಿ ‘ರಾಜರುಮಾಲು’ ಧರಿಸಿದ ಪ್ರಧಾನಿ ಮೋದಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel