ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರೈತರ ಕೃಷಿ ಉತ್ಪನ್ನಗಳನ್ನು ಕೊಳ್ಳಲು ಹಣವಿಲ್ಲ ಎಂದು ಕೈ ಎತ್ತಿದ್ದರು. ಇದು ಅದಾನಿ-ಅಂಬಾನಿಗೆ ಎಲ್ಲವನ್ನು ಕೊಡಲು ಹೊರಟಿದ್ದು, ಅವರ ನಿಂತಿದ್ದಾರೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ ಆರೋಪಿಸಿದ್ದಾರೆ.
ಕೃಷಿ ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳು ಆಯೋಜಿಸಿದ್ದ ಟ್ರ್ಯಾಕ್ಟರ್ ಜಾಥಾ ಅಂಗವಾಗಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಹೆಚ್.ಎಸ್ ದೊರೆಸ್ವಾಮಿ, ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಮೊದಲು ಅಂಬಾನಿ-ಅದಾನಿಗಳಿಗೆ ಸರ್ಕಾರ ರೈಲುಗಳನ್ನು, ಕಂಟೈನರ್ ಗಳನ್ನು ಕೊಟ್ಟಿದೆ. ಅದಾನಿ-ಅಂಬಾನಿಗಳು 150 ಔಟ್‍ಲೆಟ್ ಗಳನ್ನು ಪ್ರಾರಂಭಿಸಲು ಸಜ್ಜಾಗಿದ್ದರು. ಆದರೆ ಅಷ್ಟರಲ್ಲಿ ಪಂಜಾಬ್-ಹರ್ಯಾಣ ರೈತರು ಎಚ್ಚೆತ್ತುಕೊಂಡು ಪ್ರತಿಭಟನೆ ಮಾಡಿದ್ರು. ಅದಕ್ಕೆ ನಿಂತು ಹೋಯ್ತು ಎಂದು ಆರೋಪಿಸಿದ್ದಾರೆ.

ದೆಹಲಿಯಲ್ಲಿ ಚಳಿ-ಮಳೆಯನ್ನು ಲೆಕ್ಕಿಸದೆ ರೈತರು ಹೋರಾಟ ಮಾಡುತ್ತಿದ್ದಾರೆ. ರೈತರ ಹೋರಾಟವನ್ನು ತಡೆಯಲು ಸರ್ಕಾರ ಪ್ರಯತ್ನಿಸಿದ್ದು ಬೇಸರ. ಪೆÇಲೀಸರ ಗೋಡೆಗಳು, ಬ್ಯಾರಿಕೇಡ್ ಗಳನ್ನು ಮುರಿದು ರೈತರು ಮುನ್ನುಗ್ಗಿದ್ದಾರೆ. ಮೋದಿ ಒಣ ಪ್ರತಿಷ್ಟೆಗೋಸ್ಕರ ರೈತ ಹೋರಾಟ ತಡೆಯಲು ಪ್ರಯತ್ನಿಸಿದ್ದಾರೆ. ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ಹಾಗು ರೈತ ಧ್ವಜಾರೋಹಣ ಮಾಡಿದ್ದಾರೆ. ಟಿಯರ್ ಗ್ಯಾಸ್ ನ್ನು ಸಹಿಸಿಕೊಂಡು ಮುನ್ನುಗಿರೋದು ಸಾಹಸ. ರಾಜ್ಯದಲ್ಲೂ ಕೂಡ ಕೋಡಿಹಳ್ಳಿ ಚಂದ್ರಶೇಖರ್ ಬಣವನ್ನು ತಡೆಯುವ ಪ್ರಯತ್ನ ಮಾಡಿದ್ರು. ಅದನ್ನು ಬೇಧಿಸಿ ಚಂದ್ರಶೇಖರ್ ಸಾಹಸ ಮಾಡಿ ಬಂದಿದ್ದಾರೆ ಎಂದು ಹೆಚ್.ಎಸ್ ದೊರೆಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಮಾತನಾಡಿ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಡೆಯುತ್ತಿರುವ ಅಪೂರ್ವವಾದ ಹೋರಾಟ ಇದು. ಈಗ ನಡೆಯುತ್ತಿರುವ ಹೋರಾಟ ರೌಲಟ್ ಕಾಯ್ದೆ ವಿರುದ್ದ ನಡೆಯಿತಲ್ಲ ಸ್ವಾತಂತ್ರ್ಯ ಹೋರಾಟ ಅದೇ ಮಾದರಿಯಲ್ಲಿ ನಡೆಯುತ್ತಿರುವ ಎರಡನೆ ಸ್ವಾತಂತ್ರ್ಯ ಹೋರಾಟ. ಬಿಜೆಪಿಯವರು ಏನೇ ಮಾಡಿದ್ರೂ ರೈತರ ಹೋರಾಟದ ಮುಂದೆ ಏನೂ ನಡೆಯಲ್ಲ. ರೈತರು ಇಟ್ಟಿರುವ ಬೇಡಿಕೆ ನ್ಯಾಯಯುತವಾದ ಬೇಡಿಕೆ. ಜನರಿಂದ ಆಯ್ಕೆಯಾದವರು ಬದುಕುವ ಹಕ್ಕನ್ನು ಉಳಿಸಬೇಕು ಎಂದು ಆಗ್ರಹಿಸಿದರು.
ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಆ ಮನುಷ್ಯ.. ಮೋದಿಯ 56 ಇಂಚಿನ ಎದೆಯ ಮೇಲೆ ಇವತ್ತು ದೆಹಲಿಯಲ್ಲಿ ರೈತರು ಟ್ರಾಕ್ಟರ್ ಓಡಿಸಿದ್ದಾರೆ. ಯಡಿಯೂರಪ್ಪ ಫೇಕ್ ರೈತ ಹೋರಾಟಗಾರ. ಅವನ ಸುಳ್ಳುಗಳು ಈ ರಾಜ್ಯದ ರೈತರಿಗೆ ಅರ್ಥವಾಗಿದೆ. ರೈತರ ಬಗರ್ ಹುಕುಂ ಸಾಗುವಳಿ ಜಮೀನುಗಳನ್ನು ಕಾರ್ಪೋರೆಟ್ ಸಂಸ್ಥೆಗಳಿಗೆ ಕೊಡಲು ಹುನ್ನಾರ ಮಾಡಿದ್ದಾರೆ. ಯಡಿಯೂರಪ್ಪ ಸರ್ಕಾರದಲ್ಲಿರುವ ಮಂತ್ರಿಗಳು ಮೊದಲು ಕಾಂಗ್ರೆಸ್ ನಲ್ಲಿದ್ದರು. ಅವರಿಗಂತೂ ಎರಡು ನಾಲಿಗೆ. ಕಾಂಗ್ರೆಸ್ ನಲ್ಲಿದ್ದಾಗ ಒಂದು ನಾಲಿಗೆ, ಬಿಜೆಪಿಯಲ್ಲಿದ್ದಾಗ ಒಂದು ನಾಲಿಗೆ ಎಂದು ಆರೋಪಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








