ಕೇಂದ್ರ ಬಜೆಟ್ 2021 – ಪರೋಕ್ಷ ತೆರಿಗೆಗಳ ಹೆಚ್ಚಳ ಸಾಧ್ಯತೆ..!
ಕೇಂದ್ರ ಬಜೆಟ್ 2021 ಫೆಬ್ರವರಿ 1ಕ್ಕೆ ಮಂಡನೆಯಾಗಲಿದೆ. ಈ ಬಜೆಟ್ ಸಾಕಷ್ಟು ಕುತೂಹಲಗಳನ್ನ ಮೂಡಿಸಿದೆ. ಅಲ್ಲದೇ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಗದರಹಿತ ಬಜೆಟ್ ಮಂಡಿಸಲಿದ್ದಾರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು. ಈ ಬಜೆಟ್ ಬಗ್ಗೆ ಅನೇಕ ಲೆಕ್ಕಾಚಾರಗಳು ಶುರುವಾಗಿದೆ. ಇದೀಗ ಅಬಕಾರಿ ಸುಂಕ, ಸೆಸ್ ಸೇರಿದಂತೆ ಪರೋಕ್ಷ ತೆರಿಗೆಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗ್ತಿದೆ.
ಕಾಶ್ಮೀರದ ಕುಲ್ಗಾಮ್ ನಲ್ಲಿ ಗಸ್ತು ತಿರುಗುತ್ತಿದ್ದ ಸೇನೆಯ ಮೇಲೆ ಉಗ್ರರ ದಾಳಿ..!
ಹೌದು ತೆರಿಗೆ ಸಂಗ್ರಹವು ಹೆಚ್ಚಿಲ್ಲ ಮತ್ತು ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಟ್ರೆಂಡ್ ನಲ್ಲಿ ಮಹತ್ವದ ಪುನಶ್ಚೇತನ ನೋಡಿಲ್ಲ. ನೇರ ತೆರಿಗೆ ಹೆಚ್ಚಿಸುವುದೇ ಇದಕ್ಕಿರುವ ಮಾರ್ಗ.ಆದರೆ, ತೆರಿಗೆ ಸ್ಲಾಬ್ಸ್ ನಲ್ಲಿ ಯಾವುದೇ ಹೆಚ್ಚಳನ್ನು ಹಣಕಾಸು ಸಚಿವಾಲಯ ತಳ್ಳಿ ಹಾಕಿದೆ. ಅಲ್ಲದೇ ನಷ್ಟವನ್ನು ಸರಿದೂಗಿಸಲು ಪರೋಕ್ಷ ತೆರಿಗೆ ಹೆಚ್ಚಿಸಬಹುದು, ಹೊಸ ಸೆಸ್, ಕೆಲ ಸುಂಕಗಳಲ್ಲಿ ಹೆಚ್ಚಳವಾಗಬಹುದು ಎಂದು ಹಣಕಾಸು ಸಚಿವಾಲಯದ ಮೂಲಗಳಿಂದ ತಿಳಿದುಬಂದಿದೆ.
ಟ್ರ್ಯಾಕ್ಟರ್ ರ್ಯಾಲಿ ಗಲಭೆ : ಇಂದು ದೆಹಲಿ, ಕೆಂಪು ಕೋಟೆಯಲ್ಲಿ ಬಿಗಿ ಭದ್ರತೆ..!
ಪ್ರಸಕ್ತ ಹಣಕಾಸು ವರ್ಷದಲ್ಲಿ ತೆರಿಗೆ ಸಂಗ್ರಹ ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವುದರಿಂದ ಬರುವ ಆದಾಯವು, ಅಂದಾಜು ಬಜೆಟ್ ಗುರಿ 6.5 ಲಕ್ಷ ಕೋಟಿ ರೂ.ಗಳಿಂದ ಕಡಿಮೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಆದಾಯ ಕೊರತೆಯಾಗದಂತೆ ನೋಡಿಕೊಳ್ಳಲು ಈ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
‘ಗಾರ್ಬೇಜ್ ಸಿಟಿ’ ‘ಗಾರ್ಡನ್ ಸಿಟಿ’ ಮಾಡಲು ಹೊರಟಿರುವ LBTC..! ಯುವಕರಿಗೆ ಸ್ಪೂರ್ತಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








