ಮಂತ್ರಿಯಾಗುವ `ಹಳ್ಳಿಹಕ್ಕಿ ಕನಸು ನುಚ್ಚುನೂರು ‘ : ವಿಶ್ವನಾಥ್ ಗೆ ಸುಪ್ರೀಂ ಶಾಕ್
ನವದೆಹಲಿ : ಹಳ್ಳಿಹಕ್ಕಿ ಖ್ಯಾತಿಯ ಹೆಚ್ ವಿಶ್ವನಾಥ್ ಅವರಿಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಮಂತ್ರಿಯಾಗುವ ಕನಸು ಹೊತ್ತು ಬಿಜೆಪಿಗೆ ಬಂದು ಒದ್ದಾಡುತ್ತಿರುವ ವಿಶ್ವನಾಥ್, ಕನಸು ನುಚ್ಚುನೂರಾಗಿದೆ.
ಹೌದು..! ವಿಶ್ವನಾಥ್ ಶಾಸಕತ್ವದಿಂದ ಅನರ್ಹಗೊಂಡಿರುವುದರಿಂದ ಮಂತ್ರಿಯಾಗಲು ಬರುವುದಿಲ್ಲ ಎಂದು ಹೈಕೋರ್ಟ್ ನೀಡಿತ್ತು. ಈ ಆದೇಶವನ್ನು ಇದೀಗ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ಸಂವಿಧಾನದ ಆರ್ಟಿಕಲ್ 164 (1B), 361 B ಅಡಿ ಹೆಚ್.ವಿಶ್ವನಾಥ್ ಸಚಿವರಾಗಲು ಅನರ್ಹ ಎಂದು ಹೈಕೋರ್ಟ್ ಸಿಜೆ ಎ.ಎಸ್ ಓಕಾ, ಎಸ್.ವಿಶ್ವಜಿತ್ ಶೆಟ್ಟಿ ನೇತೃತ್ವದ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿತ್ತು. ಈ ಮೂಲಕ ಸಚಿವರಾಗುವ ಹಂಬಲದಲ್ಲಿದ್ದ ಎ.ಹೆಚ್.ವಿಶ್ವನಾಥ್ ಗೆ ಇದು ಭಾರಿ ಪೆಟ್ಟು ನೀಡಿತ್ತು.
ಹೈ ಕೋರ್ಟ್ ಈ ಆದೇಶವನ್ನ ಪ್ರಶ್ನಿಸಿ ಹೆಚ್ ವಿಶ್ವನಾಥ್ ಸುಪ್ರೀಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಅನರ್ಹತೆ ಕಾನೂನಿನಂತೆ ನೀವು ಚುನಾವಣೆಗೆ ನಿಂತು ಗೆದ್ದು ಬರುವವರೆಗೂ ಮಂತ್ರಿಯಾಗಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಹೆಚ್ ವಿಶ್ವನಾಥ್ ಅವರ ಮಂತ್ರಿಯಾಗುವ ಕನಸು ನುಚ್ಚುನೂರಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









