ಮೊನ್ನೆಯಷ್ಟೆ ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 50 ಲಕ್ಷ ದೇಣಿಗೆ ಕೊಟ್ಟಿದ್ದರು. ಇದೀಗ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡಜನರಿಗಾಗಿ ನೆರವಿನ ಹಸ್ತ ಚಾಚಿದ್ದಾರೆ.
ಪ್ರತಿ ದಿನ 500 ಮಂದಿಗೆ ಊಟದ ವ್ಯವಸ್ಥೆ..!
ಕೊರೊನಾ ಲಾಕ್ ಡೌನ್ ನಿಂದ ಜನಸಾಮಾನ್ಯರಿಗೆ ದಿನ ಸಾಗಿಸುವುದೇ ಕಷ್ಟವಾಗಿದೆ. ಹೀಗಾಗಿ ಶಿವರಾಜ್ ಕುಮಾರ್ ತಮ್ಮ ಕೈಲಾದ ಸಹಾಯ ಮಾಡಲು ಮುಂದಾಗಿದ್ದಾರೆ. ಪ್ರತಿದಿನ 500 ಮಂದಿಗೆ ಎರಡು ಹೊತ್ತು ಊಟದ ವ್ಯವಸ್ಥೆ ಮಾಡಿದ್ದು, ಪೊಲೀಸರ ನೆರವಿಗೂ ಯೋಜನೆ ಹಾಕಿಕೊಂಡಿದ್ದಾರೆ. ಈ ಕುರಿತು ಸ್ವತಃ ಶಿವಣ್ಣನೇ ಮಾಹಿತಿ ನೀಡಿದ್ದು, ಮಾನ್ಯತಾ ಗ್ರೂಪ್ ನಲ್ಲೂ ಅನ್ನದಾನ ಮಾಡುವ ಪ್ಲಾನಿದೆ. ‘ಈ ರೀತಿಯ ಕೆಲಸ ಮಾಡೋದ್ರಿಂದ ಮತ್ತೊಬ್ಬರಿಗೂ ಮಾದರಿ ಆಗುತ್ತದೆ. ನಾವೆಲ್ಲರೂ ಒಂದು, ನಮಗಾಗಿ ಮತ್ತೊಬ್ಬರು ನಿಲ್ತಾರೆ ಅನ್ನೋದು ಮುಖ್ಯ. ಜಾತಿ-ಭೇದ ಮರೆತು, ನಾವೆಲ್ಲರೂ ಈಗ ಒಂದಾಗಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.








