ಬೆಂಗಳೂರು : ಲಾಕ್ ಡೌನ್ ಯಿಂದಾಗಿ ಬಡವರಿಗೆ ತಿಂಡಿ, ಊಟಕ್ಕೆ ಸಮಸ್ಯೆ ಆಗಬಾರದೆಂದು ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ತಿಂಡಿ, ಊಟ ನೀಡಲು ಸೂಚಿಸಿತ್ತು. ಇದರಿಂದ ಇಂದಿರಾ ಕ್ಯಾಂಟೀನ್ ನಲ್ಲಿ ಲಾಕ್ ಡೌನ್ ನಂತ್ರ ತಿಂಡಿ, ಊಟ ಉಚಿತ ಆಗಿ ದೊರೆಯುತ್ತಿತ್ತು. ಆದ್ರೆ ಇದಕ್ಕೆ ಸರ್ಕಾರ ಬ್ರೇಕ್ ಹಾಕಿದ್ದು, ಮೊದಲಿನಂತೆಯೇ ರೂ.5ಕ್ಕೆ ತಿಂಡಿ, ರೂ.10ಕ್ಕೆ ಊಟ ನೀಡುವಂತೆ ತೀರ್ಮಾನವನ್ನು ಕೈಗೊಂಡಿದೆ.
ಇಂದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆಯಲ್ಲಿ, ಇಂದಿರಾ ಕ್ಯಾಂಟೀನ್ ಉಚಿತ ಊಟಕ್ಕೆ ಬ್ರೇಕ್ ಹಾಕಲಾಗಿದೆ. ಇಂದಿರಾ ಕ್ಯಾಂಟೀನ್ ನಮಗೆ ಅಗತ್ಯ ಇಲ್ಲ. ಇದರಿಂದಾಗಿ 1.65 ಕೋಟಿ ಖರ್ಚಾಗುತ್ತಿದೆ. ಹೀಗಾಗಿ ಇಂದಿರಾ ಕ್ಯಾಂಟೀನ್ ತಿಂಡಿಗೆ ರೂ.5, ಊಟಕ್ಕೆ ರೂ.10 ಹಣ ನಿಗಧಿ ಮಾಡುವಂತೆ ತೀರ್ಮಾನ ಕೈಗೊಳ್ಳಲಾಗಿದೆ. ಹೀಗಾಗಿ ನಾಳೆಯಿಂದ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಊಟ ಸಿಗೋದಿಲ್ಲ.








