ಬೆಂಗಳೂರು: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ರಾಮಚಂದ್ರನ ದೇವಾಲಯದ ತಾಂತ್ರಿಕ ಉಸ್ತುವಾರಿಯಾಗಿ ದೇಶದ ಹಿರಿಯ ಜಿಯೋ ಟೆಕ್ನಿಕಲ್ ಎಂಜಿನಿಯರ್, ಕನ್ನಡಿಗ ಪ್ರೊ.ಟಿಜಿ ಸೀತಾರಾಮ್ ನೇಮಕವಾಗಿದ್ದಾರೆ.
ಗುವಾಹಟಿ ಐಐಟಿ ನಿರ್ದೇಶಕರಾಗಿರುವ ಚಿತ್ರದುರ್ಗ ಮೂಲದ ಪ್ರೊ.. ಟಿಜಿ ಸೀತಾರಾಮ್, ಜಿಯೋ ಟೆಕ್ನಿಕಲ್ ಎಂಜಿನಿಯರಿಂಗ್ ನಲ್ಲಿ ನುರಿತ ತಜ್ಞರಾಗಿದ್ದು, ಇವರ ತಂಡದ ಸಲಹೆಯಂತೆಯೇ ರಾಮ ಮಂದಿರ ದ ತಳಪಾಯದ ಕೆಲಸ ನಡೆಯುತ್ತದೆ. ಇವರ ಮಾರ್ಗದರ್ಶನದಲ್ಲಿ ಭವ್ಯವಾದ, ಯಾವುದೇ ಕಂಪನಗಳಿಗೆ ಅಲುಗಾಡದ ರಾಮಮಂದಿರ ನಿರ್ಮಾಣವಾಗಲಿ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಶುಭಹಾರೈಸಿದ್ದಾರೆ.
ಚಳ್ಳಕೆರೆ ತಾಲೂಕು ತಳಕು ಪಟ್ಟಣದವರಾದ ಸೀತಾರಾಮ್, ಪ್ರಸಿದ್ಧ ಕಾದಂಬರಿಗಾರ ತ.ರಾ. ಸುಬ್ಬರಾವ್ ಅವರ ಕುಟುಂಬದ ದೂರದ ಸಂಬಂಧಿ. ಪ್ರಸ್ತುತ ಗುವಾಹತಿಯ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊಫೆಸರ್ ಸೀತಾರಾಮ್ ಅವರು ರಾಕ್ ಮೆಕ್ಯಾನಿಕ್ಸ್, ರಾಕ್ ಎಂಜಿನಿಯರಿಂಗ್ ಮತ್ತು ಜಿಯೋಟೆಕ್ನಿಕಲ್ ಅರ್ಥ್ ಕ್ವೇಕ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ತಮ್ಮ ಸಾಮಥ್ರ್ಯಕ್ಕೆ ಹೆಸರಾಗಿದ್ದಾರೆ. ಇಂಡಿಯನ್ ಜಿಯೋಟೆಕ್ನಿಕಲ್ ಸೊಸೈಟಿ, ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಮತ್ತು ಅಮೆರಿಕನ್ ಸೊಸೈಟಿ ಆಫ್ ಸಿವಿಲ್ ಇಂಜಿನಿಯರ್ಸ್‍ನ ಚುನಾಯಿತ ಸದಸ್ಯರೂ ಕೂಡ ಆಗಿದ್ದಾರೆ.
1994 ರಿಂದ ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದ ಟಿಜಿ ಸೀತಾರಾಮ್, 2014ರವರೆಗೆ ಐಐಎಸ್‍ಸಿಯಲ್ಲಿ ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ಕೇಂದ್ರದಲ್ಲಿ ಕೆಲಸ ಮಾಡಿದ್ದಾರೆ. ಈಗ ಅವರು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿನ ಎಂಟು ಸದಸ್ಯರ ತಾಂತ್ರಿಕ ಸಿಬ್ಬಂದಿಗಳ ತಂಡದಲ್ಲಿ ಸೇರಿದ್ದಾರೆ. ಈ ತಂಡವನ್ನು ಕೇಂದ್ರ ಸರ್ಕಾರದಿಂದ ನೇಮಕ ಮಾಡಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel