ನಿಮ್ಮ ಹಣವನ್ನು ದ್ವಿಗುಣಗೊಳಿಸಲು ಇಲ್ಲಿದೆ ಪೋಸ್ಟ್ ಆಫೀಸ್ ನ ಅತ್ಯುತ್ತಮ ಯೋಜನೆ
ಹೊಸದಿಲ್ಲಿ, ಫೆಬ್ರವರಿ02: ನೀವು ಹಣವನ್ನು ದ್ವಿಗುಣಗೊಳಿಸಲು ಯೋಜಿಸುತ್ತಿದ್ದರೆ, ಪೋಸ್ಟ್ ಆಫೀಸ್ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಅಂಚೆ ಕಚೇರಿಯಲ್ಲಿ ನೀವು ಕೆಲವು ತಿಂಗಳುಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಬಹುದು.
ಇದರಲ್ಲಿ ಅಪಾಯವು ಸಹ ಕಡಿಮೆ ಇರುವುದರ ಜೊತೆಗೆ, ಹಣವನ್ನು ಸಹ ಉಳಿಸ ಬಹುದಾಗಿದೆ. ಅನೇಕ ರೀತಿಯ ಯೋಜನೆಗಳನ್ನು ಗ್ರಾಹಕರಿಗೆ ಅಂಚೆ ಕಚೇರಿಯು ನೀಡುತ್ತದೆ. ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ ಇದರಲ್ಲಿ ಒಂದು. ಈ ಯೋಜನೆಯಡಿಯಲ್ಲಿ ನೀವು 124 ತಿಂಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಬಹುದು.
ಏಪ್ರಿಲ್ 1, 2020 ರಿಂದ, ಕಿಸಾನ್ ವಿಕಾಸ್ ಪತ್ರದಲ್ಲಿ (ಕೆವಿಪಿ) ನೀವು ವಾರ್ಷಿಕವಾಗಿ 6.9 ಶೇಕಡಾ ಬಡ್ಡಿಯನ್ನು ಪಡೆಯುತ್ತೀರಿ. ಅದೇ ಸಮಯದಲ್ಲಿ, ಸರ್ಕಾರವು ಈ ಯೋಜನೆಗೆ ಬಡ್ಡಿಯನ್ನು ಶೇಕಡಾ 7.6 ದರದಲ್ಲಿ ಪಾವತಿಸುತ್ತದೆ. ನೀವು ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಹಣವು 10 ವರ್ಷ ಮತ್ತು 4 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ.
ನಾಳೆಯಿಂದ ಗ್ಯಾಸ್ ಸಿಲಿಂಡರ್ಗಳ ಬೆಲೆ ಏರಿಕೆ ಸಂಭವ?
ಉದಾಹರಣೆಗೆ, ಈ ಯೋಜನೆಯಲ್ಲಿ ನೀವು 5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ್ದೀರಿ ಎಂದು ಭಾವಿಸೋಣ. ಆಗ ನಿಮಗೆ 124 ತಿಂಗಳ ನಂತರ 10 ಲಕ್ಷ ರೂಪಾಯಿ ಸಿಗುತ್ತದೆ.
ಕಿಸಾನ್ ವಿಕಾಸ್ ಪತ್ರದಲ್ಲಿ, 1000, 5,000,10,000 ಮತ್ತು 50,000 ರೂ ನಂತೆ ಮೊತ್ತ ತೊಡಗಿಸಬಹುದು. ನೀವು ಈ ಖಾತೆಯಲ್ಲಿ ಕನಿಷ್ಠ ಒಂದು ಸಾವಿರ ರೂಪಾಯಿಗಳನ್ನು ಜಮಾ ಮಾಡಬೇಕು. ಈ ಖಾತೆಯಲ್ಲಿ ಹಣವನ್ನು ಜಮಾ ಮಾಡಲು ಗರಿಷ್ಠ ಮಿತಿಯಿಲ್ಲ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಈ ಯೋಜನೆಯಡಿಯಲ್ಲಿ, ಮಕ್ಕಳು, ವಯಸ್ಕರು ಕೂಡ ತಮ್ಮ ಖಾತೆಯನ್ನು ತೆರೆಯಬಹುದು. ಕೆವಿಪಿ ಪ್ರಮಾಣಪತ್ರವನ್ನು ಯಾವುದೇ ವಯಸ್ಕರು, ಗರಿಷ್ಠ ಮೂರು ವಯಸ್ಕರೊಂದಿಗೆ, ಜಂಟಿ ಖಾತೆಯಲ್ಲಿ ಖರೀದಿಸಬಹುದು. ಇದಲ್ಲದೆ, ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಮತ್ತು ಪಾಲಕರ ಹೆಸರಿನಲ್ಲಿ ಅದನ್ನು ಆ ವ್ಯಕ್ತಿಯ ಪರವಾಗಿ ಕೂಡ ಖರೀದಿಸಬಹುದಾಗಿದೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಕರಿಬೇವಿನ ಸೊಪ್ಪುಗಳ ಆರೋಗ್ಯ ಪ್ರಯೋಜನಗಳುhttps://t.co/NzME20h64d
— Saaksha TV (@SaakshaTv) February 1, 2021
ನಬಾರ್ಡ್ ಸಹಾಯಧನದ ಜೊತೆಗೆ 1.8 ಲಕ್ಷ ಬಂಡವಾಳ ಹೂಡಿ ವ್ಯಾಪಾರ ಮಾಡಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸಿhttps://t.co/Yd9ZhQl2DX
— Saaksha TV (@SaakshaTv) February 1, 2021