ಬೆಳ್ಳಂ ಬೆಳಿಗ್ಗೆ ಭಷ್ಟಾಧಿಕಾರಿಗಳಿಗೆ ACB ಶಾಕ್..!
ಬೆಳ್ಳಂ ಬೆಳಿಗ್ಗೆ ಭಷ್ಟಾಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ರಾಜ್ಯಾದ ಒಟ್ಟು 30 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟು 7 ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ರೇಡ್ ಮಾಡಿರುವ ಅಧಿಕಾರಿಗಳು, ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಇನ್ನೂ ಧಾರವಾಡದ ಶಿಗ್ಗಾವಿಯ EE ಅಧಿಕಾರಿ ದೇವರಾಜ್ ಕಲ್ಲೇಶ್, ಬೆಂಗಳೂರು ಸಹಕಾರ ಸಂಘಗಳ ಜಂಟಿ ನಿಂಬಂಧಕ ಅಧಿಕಾರಿ ಪಾಂಡುರಂಗ ಗರಗ್, ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಜಯರಾಜ್ ಕೆ.ವಿ, ಕೋಲಾರದ DHO ಡಾ.ವಿಜಯಕುಮಾರ್, ಕೊಪ್ಪಳ ಕಿಮ್ಸ್ ಆಸ್ಪತ್ರೆಯ HOD ಶ್ರೀನಿವಾಸ್, ಮಾಗಡಿ ಉಪವಿಭಾಗದ JE , PWD ಅಧಿಕಾರಿ ಚನ್ನಬಸಪ್ಪ ಅವಟಿ, ಧಾರವಾಡದ ACF ಶ್ರೀನಿವಾಸ್ ಅವರ ಮನೆಗಳು ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಕಾರ್ಯಾಚರಣೆಯನ್ನ ಮುಂದುವರೆಸಿದ್ದಾರೆ.
ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಬಿಜೆಪಿ : ಡಿ.ಕೆ.ಶಿವಕುಮಾರ್
ಇನ್ನೂ ಡಿ ಪಾಂಡುರಂಗ ಗರಗ್ ಗೆ ಸಂಬಂಧಿಸಿದ ವಿಜಯನಗರದ ಮನೆ ಜಯನಗರದ ಫ್ಲಾಟ್, ಮಲ್ಲೇಶ್ವರಂ ಕಚೇರಿ, ಹಾಗೂ ಚಿತ್ರದುರ್ಗದ ಮನೆ ಸೇರಿ ಐದು ಕಡೆ ದಾಳಿ ನಡೆಸಲಾಗಿದೆ. ಒಟ್ಟು ಬೆಂಗಳೂರು ನಗರ, ಬಳ್ಳಾರಿ, ಕೋಲಾರ,ಧಾರವಾಡ, ದಕ್ಷಿಣ ಕನ್ನಡ, ಚಿತ್ರದುರ್ಗ ಹಾಗೂ ಬೀದರ್ ನಲ್ಲಿ ACB ಅಧಿಕಾರಿಗಳು ರೇಡ್ ನಡೆಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel