15 ದಿನಗಳೊಳಗೆ ಸಾರಿಗೆ ನೌಕರರ ಬೇಡಿಕೆ ಈಡೇರಿಕೆ
ಬೆಂಗಳೂರು : 15 ದಿನಗಳಲ್ಲಿ ಸಾರಿಗೆ ನೌಕರರ ಪ್ರಮುಖ ಮೂರು ಬೇಡಿಕೆ ಈಡೇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮನ ಸವದಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸವದಿ, ಸಾರಿಗೆ ನೌಕರರು ಹಿಂದೆ ಪ್ರತಿಭಟಿಸಿದ್ದರು. ಅವರ ಹತ್ತು ಬೇಡಿಕೆ ಪೈಕಿ ಒಂಭತ್ತಕ್ಕೆ ಸಹಮತ ಕೊಟ್ಡಿದ್ವಿ. ಮೂರು ತೀರ್ಮಾನ ಘೋಷಿಸಿದ್ವಿ.
ತರಬೇತಿ ಅವಧಿ ಎರಡರಿಂದ ಒಂದು ವರ್ಷಕ್ಕೆ ಇಳಿಸಲು ಒಪ್ಪಿದ್ವಿ. ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ಒಪ್ಪಿದ್ವಿ. ಬಾಟಾ ಮುಂದುವರೆಸಲು ಒಪ್ಪಿದ್ವಿ. ಇದೀಗ ಬೇಡಿಕೆ ತ್ವರಿತವಾಗಿ ಈಡೇರಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಇನ್ನು ನೌಕರರ ಅಮಾನತು ಬಗ್ಗೆ ಮಾತನಾಡಿ, ನಾವು ಪ್ರತಿಭಟಿಸಿದ ಸಾರಿಗೆ ನೌಕರರನ್ನು ಅಮಾನತು ಮಾಡಿಲ್ಲ. ಕೇವಲ ಅಪರಾಧ ಎಸಗಿದವರನ್ನು ಅಮಾನತು ಮಾಡಿದ್ದೆವು. ಸಾರಿಗೆ ನೌಕರರ ವೇತನ ಕೊಡುತ್ತೇವೆ.
ಅರ್ಧ ವೇತನ ಈಗಾಗಲೇ ಕೊಟ್ಟಿದ್ದೇವೆ. ಆರ್ಥಿಕ ಇಲಾಖೆ ಜೊತೆ ಚರ್ಚಿಸಿ ಡಿಸೆಂಬರ್, ಜನವರಿ 2 ತಿಂಗಳ ವೇತನ ಕೊಡಲು ನಿರ್ಧರಿಸಿದ್ದೇವೆ ಎಂದರು.
ಇದೇ ವೇಳೆ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಿಡಿಕಾರಿದ ಅವರು, ನೌಕರ ವರ್ಗಕ್ಕೆ ಸರ್ಕಾರದ ಮೇಲೆ ಹಾಗೂ ಸರ್ಕಾರಕ್ಕೆ ನೌಕರ ವರ್ಗದ ಮೇಲೆ ಭರವಸೆ ಇದೆ.
ಒಂದು ಕುಟುಂಬದಂತೆ ನಾವಿದ್ದೇವೆ. ಮಧ್ಯದಲ್ಲಿ ಯಾರೋ ಬಂದು ಆತಂಕ ಹುಟ್ಟಿಸುವ ಪ್ರಯತ್ನ ಮಾಡುವುದು ಬೇಡ ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









