ಎಲ್ಲರಿಗೂ ನಾರ್ಮಲ್, ನಮಗ್ಯಾಕೆ ಅಬ್ ನಾರ್ಮಲ್ : ಶಿವಣ್ಣ
ಬೆಂಗಳೂರು : ಕೇಂದ್ರ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಭರ್ತಿಗೆ ಅವಕಾಶ ನೀಡಿದ್ದರೂ, ರಾಜ್ಯ ಸರ್ಕಾರ ಶೇ 50 ರಷ್ಟು ಮಾತ್ರ ಚಿತ್ರಮಂದಿರ ಭರ್ತಿಗೆ ಅವಕಾಶ ನೀಡಿದೆ.
ಈ ಬಗ್ಗೆ ಸಿನಿ ದಿಗ್ಗಜರು, ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಅದರಂತೆ ಇದೀಗ ಸ್ಯಾಂಡಲ್ ವುಡ್ ಲೀಡರ್ ಶಿವಣ್ಣ” ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ 100ರಷ್ಟು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಕರುನಾಡ ಚಕ್ರವರ್ತಿ ಶಿವರಾಜ್?ಕುಮಾರ್ ಟ್ವಿಟರ್ ನಲ್ಲಿ ಆಗ್ರಹಿಸಿದ್ದು, ಎಲ್ಲರಿಗೂ ನಾರ್ಮಲ್, ನಮಗ್ಯಾಕೆ ಅಬ್ ನಾರ್ಮಲ್.
ದೇಶದಲ್ಲಿ ಎಲ್ಲರಿಗೂ ಚಿತ್ರಮಂದಿರಗಳಲ್ಲಿ 100ರಷ್ಟು ಪ್ರೇಕ್ಷಕರು ಕೂರುವಂತೆ ಅವಕಾಶ ಕೊಟ್ಟಿರುವಾಗ ನಮಗ್ಯಾಕೆ 50 ಪಸೆರ್ಂಟ್.
https://twitter.com/i/status/1356881638530052096
ನಮಗೂ 100 ಪಸೆರ್ಂಟ್ ಪ್ರೇಕ್ಷಕರು ಕೂರಲು ಅವಕಾಶ ಕೊಡಿ. ಚಿತ್ರರಂಗಕ್ಕೋಸ್ಕರ ನಾವು ಜೊತೆಯಲ್ಲಿದ್ದೇವೆ.
ಸರ್ಕಾರದ ನಿರ್ಧಾರ ಬದಲಾಗಲೇಬೇಕು. ನಮಗೂ 100 ಪಸೆಂಟ್ ಭರ್ತಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇಂದು ಬೆಳಿಗ್ಗೆ ಇದೇ ವಿಚಾರವಾಗಿ ನಟ ಧ್ರುವ ಸರ್ಜಾ ಟ್ವೀಟ್ ಮಾಡಿ, ಮಾರ್ಕೆಟ್ ನಲ್ಲಿ ಗಿಜಿ ಗಿಜಿ ಜನ ಸೇರ್ತಾರೆ.
ಬಸ್ಸಿನಲ್ಲಿ ಫುಲ್ ರಷ್ ಇರುತ್ತೆ. ಆದ್ರೆ ಚಿತ್ರಮಂದಿರಕ್ಕೆ ಮಾತ್ರ ಯಾಕೆ ಶೇಕಡಾ 50 ರಷ್ಟು ನಿರ್ಬಂಧ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಈ ಟ್ವೀಟ್ ಅನ್ನು ಸಿಎಂ,ಡಿಸಿಎಂ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಗೆ ಟ್ಯಾಗ್ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








