ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್ ಫೈನಲ್ – ನ್ಯೂಜಿಲೆಂಡ್ ಜೊತೆ ಆಡುವ ಇನ್ನೊಂದು ತಂಡ ಯಾವುದು ?
ಭಾರತ, ಇಂಗ್ಲೆಂಡ್ – ಆಸ್ಟ್ರೇಲಿಯಾ ತಂಡಗಳ ನಡುವೆ ಪೈಪೋಟಿ
ಭಾರತ ಮತ್ತು ಇಂಗ್ಲೆಂಡ್ ಸರಣಿ ಮೇಲೆ ಮೂರು ತಂಡಗಳ ಭವಿಷ್ಯ ?
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನ ಅಂಕಿ ಅಂಶಗಳು ಏನು ಹೇಳ್ತಾವೆ ?
ಅದೃಷ್ಟದ ಬಲವನ್ನು ಪಡೆದುಕೊಂಡಿರುವ ನ್ಯೂಜಿಲೆಂಡ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಫೈನಲ್ ಪ್ರವೇಶಿಸಿದೆ.
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಮುಂದೂಡಿದ ಕಾರಣ ನ್ಯೂಜಿಲೆಂಡ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಪ್ರವೇಶಿಸಿದ ಮೊದಲ ತಂಡವಾಗಿ ಹೊರಹೊಮ್ಮಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯ ಇಂಗ್ಲೆಂಡ್ ನಲ್ಲಿ ಜೂನ್ 18ರಿಂದ 22ರವರೆಗೆ ನಡೆಯಲಿದೆ. ಜೂನ್ 23 ರಿಸರ್ವ್ ಡೇ ಆಗಿದೆ.
ಹಾಗಿದ್ರೆ ಟೀಮ್ ಇಂಡಿಯಾಗೆ ಅವಕಾಶವಿಲ್ವಾ ? ಖಂಡಿತ ಇದೆ. ಆದ್ರೆ ಟೀಮ್ ಇಂಡಿಯಾ ಫೈನಲ್ ಗೆ ಎಂಟ್ರಿಯಾಗಬೇಕಾದ್ರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲಲೇಬೇಕು. ಹಾಗೇ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳಿಗೂ ಅವಕಾಶಗಳಿವೆ.
ಸದ್ಯ ಟೀಮ್ ಇಂಡಿಯಾ 430 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ನ್ಯೂಜಿಲೆಂಡ್ 420 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇಂಗ್ಲೆಂಡ್ 412 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 332 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಹೀಗಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಫಲಿತಾಂಶ ಮೂರು ತಂಡಗಳ ಭವಿಷ್ಯವನ್ನು ನಿರ್ಧರಿಸಲಿದೆ.
ಇನ್ನು ಟೀಮ್ ಇಂಡಿಯಾ ಫೈನಲ್ ಪ್ರವೇಶ ಮಾಡಬೇಕಾದ್ರೆ ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1, 2-0, 3-1, 3-0, 4-0 ಅಂತರದಿಂದ ಗೆಲ್ಲಬೇಕು.
ಹಾಗೇ ಇಂಗ್ಲೆಂಡ್ ಫೈನಲ್ ಪ್ರವೇಶಿಸಬೇಕಾದ್ರೆ ಟೀಮ್ ಇಂಡಿಯಾ ವಿರುದ್ಧದ ಸರಣಿಯನ್ನು 3-1, 3-0, 4-0 ಅಂತರದಿಂದ ಗೆಲ್ಲಬೇಕು.
ಒಂದು ವೇಳೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಡ್ರಾಗೊಂಡ್ರೆ ಅಥವಾ ಭಾರತ 1-0ಯಿಂದ ಗೆದ್ರೆ, ಅಥವಾ ಇಂಗ್ಲೆಂಡ್ 1-0, 2-1 ಅಂತರದಿಂದ ಗೆದ್ರೆ ಆಸ್ಟ್ರೆಲಿಯಾ ತಂಡಕ್ಕೆ ಫೈನಲ್ ಎಂಟ್ರಿಯಾಗಲಿದೆ.
ಹೀಗೆ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಫೈನಲ್ ಪ್ರವೇಶಿಸುವ ಹಾದಿಯಲ್ಲಿ ಕೂಡ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.








