‘ಎಂ’ ಎಂದು ಮೋದಿ ಕಾಲೆಳೆಯಲು ಹೋಗಿ ಟ್ರೋಲ್ ಗೆ ಗುರಿಯಾಗಿದ್ದಾರೆ ರಾಹುಲ್ ಗಾಂಧಿ..!
ರಾಹುಲ್ ಗಾಂಧಿ ಟ್ರೋಲಿಗರ ಪಾಲಿನ ಆಹಾರವಾಗೋದು ಹೊಸ ವಿಚಾರವೇನಲ್ಲ. ಅವರು ಆಗಾಗ ಟ್ರೋಲಿಗರಿಂದ ಟ್ರೋಲ್ ಆಗ್ತಲೇ ಇರುತ್ತಾರೆ. ಅವರೇ ನೀಡೋ ಹೇಳಿಕೆಗಳಿಂದಲೇ ಅವರು ಟ್ರೋಲಾಗೋದು ಹೆಚ್ಚು. ಅದ್ರಂತೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಪ್ರಧಾನಿ ಮೋದಿ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿ ಮತ್ತೊಮ್ಮೆ ಟ್ರೋಲ್ ಆಗ್ತಾಯಿದ್ದಾರೆ. ಸದಾ ಭಾಷಣಗಳ ವೇಳೆ ಏನಾದ್ರೂ ಎಡವಟ್ಟು ಹೇಳಿಕೆಗಳನ್ನ ನೀಡಿ ಟ್ರೋಲ್ ಪೇಜ್ ನಲ್ಲಿ ಕಾಣಿಸಿಕೊಳ್ಳುವ ರಾಗಾ ಇತ್ತೀಚೆಗೆ ಮೋದಿ ಅವರನ್ನ ಸರ್ವಾಧಿಕಾರಿಗಳಿಗೆ ತುಲನೆ ಮಾಡಿ ಮಾತನಾಡಿದ್ರು.
ಅಂದ್ರೆ ರಾಹುಲ್ ಗಾಂಧಿ ಅವರು ಮೋದಿ ಅವರ ಹೆಸರನ್ನ ಹೇಳದೇ ಕೇವಲ ‘ಎಂ’ ಅಕ್ಷರ ಹೇಳಿ ಪರೋಕ್ಷವಾಗಿ ಮೋದಿ ಅವರನ್ನ ಟೀಕೆ ಮಾಡಿದ್ರು. ಹೆಚ್ಚಿನ ರ‍್ವಾಧಿಕಾರಿಗಳ ಹೆಸರು ‘ಎಂ’ ಎಂಬ ಅಕ್ಷರದಿಂದಲೇ ಆರಂಭವಾಗುವುದೇಕೆ ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಮೋದಿ ವಿರುದ್ಧ ವಾಗ್ದಾಳಿ ನಡೆಸಲು ಹೋಗಿ ತಾವೇ ಟ್ರೋಲ್ ಗೆ ಗುರಿಯಾಗಿದ್ದಾರೆ. ಕೆಲವು ನಾಯಕರ ಹೆಸರನ್ನು ಟ್ವಿಟರ್‌ನಲ್ಲಿ ಉಲ್ಲೇಖ ಮಾಡಿರುವ ರಾಹುಲ್‌ಗಾಂಧಿ ಈ ಎಲ್ಲ ರ‍್ವಾಧಿಕಾರಿಗಳ ಹೆಸರು ‘ಎಂ’ ಅಕ್ಷರದಿಂದಲೇ ಇರುವ ಔಚಿತ್ಯವೇನು ಎಂದು ಪ್ರಶ್ನಿಸಿದ್ದಾರೆ. ಮರ‍್ಕೋಸ್, ಮುಸೊಲಿನಿ, ಮಿಲೋಸೆವಿಕ್, ಮುಬಾರಕ್, ಮೊಬುಟು, ಮುಷರಫ್, ಮೈಕೊಂಬೆರೊ ಸಾಕಷ್ಟು ರ‍್ವಾಧಿಕಾರಿಗಳ ಹೆಸರು ಎಂ ಎಂಬ ಅಕ್ಷರದಿಂದಲೇ ಆರಂಭವಾಗವುದೇಕೆ ಎಂದು ಕೇಳಿದ್ದಾರೆ.
31 ಲಕ್ಷ ರೂ. ಖರ್ಚು ಮಾಡಿ ಪತ್ನಿಯನ್ನ ಕೆನಡಾಗೆ ಕಳುಹಿಸಿದವನ ಪರಿಸ್ಥಿತಿ ಏನಾಯ್ತು ನೋಡಿ..!
ರಾಹುಲ್‌ಗಾಂಧಿಯವರು ಯಾರನ್ನು ಟರ‍್ಗೆಟ್‌ಮಾಡಿಕೊಂಡು ಈ ಮಾತನ್ನು ಹೇಳುತ್ತಿದ್ದಾರೆ ಎಂದು ತಿಳಿದಿರುವ ಕಮೆಂಟಿಗರು ಅವರ ಕಾಲೆಳೆಯಲು ಶುರು ಮಾಡಿದ್ದಾರೆ. ಹಾಗಿದ್ರೆ ನಿಮ್ಮ ಪಕ್ಷದ ಪ್ರಧಾನಿಯಾದ್ದವರ (ಮನ್‌ಮೋಹನ್‌ಸಿಂಗ್) ಹೆಸರು ಕೂಡ ಎಂ ಅಕ್ಷರದಿಂದಲೇ ಶುರುವಾಗುತ್ತದೆಯಲ್ಲವೆ ಎಂದು ಹಲವರು ಕಮೆಂಟ್‌ಮಾಡಿದ್ದರೆ, ಈ ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟ ಮಹಾನುಭಾವನ ಹೆಸರು ಕೂಡ ‘ಎಂ’ನಿಂದಲೇ ಶುರುವಾಗುವುದು. ಅವರನ್ನು ನೀವು ಈ ರೀತಿ ಟೀಕೆ ಮಾಡುವುದು ಸರಿಯೆ ಎಂದು ಇನ್ನು ಕೆಲವರು ಪ್ರಶ್ನಿಸಿದ್ದಾರೆ. ಒಟ್ಟಾg ಪ್ರದಾನಿ ಮೋದಿ ಅವರ ಕಾಲೆಳೆಯಲು ಹೋದ ರಾಹುಲ್ ಗಾಂಧಿ ತಮ್ಮ ಕಾಲಿನ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದAತೂ ಸುಳ್ಳಲ್ಲ..
ಈತ ವೈದ್ಯ ಅಲ್ಲ ನಂ. 1 ಫ್ರಾಡ್ : ನಕಲಿ ವೈದ್ಯನ ನಂಬಿ ಮೋಸಹೋದವರೆಷ್ಟು ಮಂದಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








