ನಟಿ ರಾಧಿಕಾ ಕುಮಾರಸ್ವಾಮಿಗೆ ಮತ್ತೊಮ್ಮೆ ಸಂಕಷ್ಟ ?
ಬೆಂಗಳೂರು, ಫೆಬ್ರವರಿ04: ನಟಿ ರಾಧಿಕಾ ಕುಮಾರಸ್ವಾಮಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಯುವರಾಜ್ ಜೊತೆ ಹಣದ ವ್ಯವಹಾರ ಮಾಡಿದ್ದ ಆರೋಪ ಎದುರಿಸುತ್ತಿರುವ ರಾಧಿಕಾ ಕುಮಾರಸ್ವಾಮಿ ಇದೀಗ ಆದಾಯ ತೆರಿಗೆ ವಿಚಾರಣೆ ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತಿದೆ.

ಈಗಾಗಲೇ ರಾಧಿಕಾ ಕುಮಾರಸ್ವಾಮಿ, ಯುವರಾಜ್ ಜೊತೆಗಿನ ಹಣದ ವ್ಯವಹಾರಕ್ಕೆ ಸಂಬಂಧಿಸಿ ಸಿಸಿಬಿ ವಿಚಾರಣೆ ಎದುರಿಸಿದ್ದಾರೆ. ಯುವರಾಜ್ ತನ್ನ ಚಾಲಕನ ಅಕೌಂಟ್ನಿಂದ ಹಣದ ವ್ಯವಹಾರ ನಡೆಸಿದ್ದ. ಹಾಗಾಗಿ ಆದಾಯ ತೆರಿಗೆ ಇಲಾಖೆ ಚಾಲಕನಿಗೆ ನೋಟಿಸ್ ಕೊಟ್ಟಿದ್ದು, ವಿಚಾರಣೆಗೆ ಕರೆದಿದ್ದಾರೆ.
ಮಾಜಿ ಹಿರಿಯ ಐಪಿಎಸ್ ಅಧಿಕಾರಿ ಆರ್ ಪಿ ಶರ್ಮಾ ನಿಧನ
ಯುವರಾಜ್ ಜೊತೆ ಹಣದ ವ್ಯವಹಾರ ಮಾಡಿದ್ದ ಎಲ್ಲರಿಗೂ ಐಟಿ ಇಲಾಖೆ ನೋಟಿಸ್ ನೀಡಲು ತಯಾರಿ ನಡೆಸುತ್ತಿದ್ದು, ನಟಿ ರಾಧಿಕಾ ಕುಮಾರ್ ಸ್ವಾಮಿಗೆ ಕೂಡ ಆದಾಯ ತೆರಿಗೆ ಇಲಾಖೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಲಿದೆ ಎಂದು ಹೇಳಲಾಗುತ್ತಿದೆ.

ಆದಾಯ ತೆರಿಗೆ ಇಲಾಖೆ ತಂಡ ಹಣದ ವ್ಯವಹಾರದ ವಿಚಾರಣೆಯನ್ನು ನಡೆಸಲಿದ್ದು, ಇ.ಡಿ ಸಂಸ್ಥೆ ಕೂಡ ಈ ಪ್ರಕರಣದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಚಹಾ ಪ್ರಿಯರು ತಿಳಿದುಕೊಂಡಿರಬೇಕಾದ ಅತಿ ಮುಖ್ಯ ಮಾಹಿತಿಗಳು https://t.co/qRjNOVqDe4
— Saaksha TV (@SaakshaTv) February 3, 2021
ನಿಮ್ಮ ಹಣವನ್ನು ದ್ವಿಗುಣಗೊಳಿಸಲು ಇಲ್ಲಿದೆ ಪೋಸ್ಟ್ ಆಫೀಸ್ ನ ಅತ್ಯುತ್ತಮ ಯೋಜನೆhttps://t.co/8E72nNsNpo
— Saaksha TV (@SaakshaTv) February 3, 2021
Is Radhika Kumaraswamy has to face Income Tax Inquiry








