ಪ್ರತಿಭಟನೆಯಲ್ಲಿ ಭಾಗಿಯಾದ್ರೆ ಸಿಗಲ್ಲ ಸರ್ಕಾರಿ ಉದ್ಯೋಗ, ಜಾಲತಾಣದಲ್ಲಿ ಪೋಸ್ಟ್ ಹಾಕಿದ್ರೆ ಸಿಗಲ್ಲ ಪಾಸ್ ಪೋರ್ಟ್..!
ಬಿಹಾರ ಸರ್ಕಾರ ಇದೀಗ ವಿವಾದಾತ್ಮಕ ಆದೇಶವೊಂದನ್ನ ಹೊರೆಡಿಸಿದ್ದು, ತೀವ್ರ ವಿರೋಧ ವ್ಯಕ್ತವಾಗ್ತಿದೆ. ಹೌದು ಪ್ರತಿಭಟನೆಗಳು, ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾದವರಿಗೆ, ಜಾಲತಾಣಗಳಲ್ಲಿ ಪ್ರಚೋದಾತ್ಮಕ , ಪ್ರತಿಭಟನೆಗೆ ಸಂಬಂಧಿತ ಪೋಸ್ಟ್ ಹಾಕಿದವರಿಗೆ ಇನ್ಮುಂದೆ ಸರ್ಕಾರಿ ಉದ್ಯೋಗ, ಸರ್ಕಾರಿ ಸೌಲಭ್ಯ ಸಿಗೋದಿಲ್ಲ. ಅಲ್ದೇ ಸರ್ಕಾರಿ ಸವಲತ್ತುಗಳು ಸಹ ಸಿಗುವುದಿಲ್ಲ. ಗುತ್ತಿಗೆ ಆಧಾರಿತ ಕೆಲಸ, ಒಪ್ಪಂದ, ಮಂಡಳಿ ಮತ್ತು ಆಯೋಗದ ಕೆಲಸ, ಜೊತೆಗೆ ಪೆಟ್ರೋಲ್ ಬಂಕ್ ಲೈಸೆನ್ಸ್, ಗ್ಯಾಸ್ ಏಜೆನ್ಸಿ ಪರವಾನಗಿ, ಪಾಸ್ಪೋರ್ಟ್, ಸರ್ಕಾರಿ ಅನುದಾನ, ಬ್ಯಾಂಕ್ ಸಾಲ ಪಡೆಯಲು ಸಹ ಅವಕಾಶವಿರುವುದಿಲ್ಲ ಎಂದು ಬಿಹಾರ ಸರ್ಕಾರ ಸುತ್ತೋಲೆ ಹೊರಡಿಸಿದೆ. ಉತ್ತರಖಂಡ ಸರ್ಕಾರದ ಮಾದರಿಯಲ್ಲೇ ಬಿಹಾರದಲ್ಲೂ ಆದೇಶ ಹೊರಡಿಸಲಾಗಿದೆ. ರಾಷ್ಟ್ರ ವಿರೋಧಿ ಪೋಸ್ಟ್ ಗಳನ್ನ ಹಾಕುವವರ ವಿರುದ್ಧ ಪೊಲೀಸರು ನಿಗಾ ವಹಿಸಲಿದ್ದಾರೆ. ಪಾಸ್ ಪೋರ್ಟ್ ಪರಿಶೀಲನೆ ವೇಳೆ ಇದು ಅವರಿಗೆ ಕೆಡಕಾಗಬಹುದು.
ಮತ್ತೆ ಏರಿಕೆ ಕಂಡ ಪೆಟ್ರೋಲ್, ಡಿಸೇಲ್ ಬೆಲೆ | ಯಾರು ಧ್ವನಿ ಎತ್ತುತ್ತಿಲ್ಲವೇಕೆ..?
ರಾಜ್ಯ ರಾಜಧಾನಿಯಲ್ಲಿ ಬೀದಿ ನಾಯಿಗಳ ಹಾವಳಿ : ನಾಯಿಗಳ ದಾಳಿಗೆ 10 ಮಂದಿ ಗಂಭೀರ ಗಾಯ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







