ವ್ಯಾಲೆಂಟೈನ್ಸ್ ಡೇ | ವೆರೈಟಿ ಆಫರ್ ಕೊಟ್ಟ ಲಾ ಕಂಪನಿ
ವಾಷಿಂಗ್ಟನ್ : ವ್ಯಾಲೆಂಟೈನ್ಸ್ ಡೇ ಅಂಗವಾಗಿ ಲಾ ಕಂಪನಿ ವೆರೈಟಿ ಆಫರ್ ನೀಡಿದೆ. ಅಂದು ಒಂದು ಲಕ್ಕಿ ಕಪಲ್ ಗೆ ಉಚಿತವಾಗಿ ಡೈವರ್ಸ್ ಕೊಡಿಸುವುದಾಗಿ ಘೋಷಿಸಿದೆ.
ಟೆನ್ನೆಸ್ಸೀ ಕ್ರಾಸ್ ವಿಲ್ಲೆಯಲ್ಲಿರುವ ಪವರ್ಸ್ ಲಾ ಫರ್ಮ್ ಈ ಆಫರ್ ನೀಡಿದೆ. ಅದೃಷ್ಟಶಾಲಿ ಜೋಡಿಯನ್ನು ಆಯ್ಕೆ ಮಾಡಿ ಅವರ ವಿಚ್ಛೇದನಕ್ಕಾಗಿ ಆಗುವ ಎಲ್ಲ ಖರ್ಚು,ಲೀಗನ್ ಸರ್ವೀಸ್ ಅನ್ನು ಉಚಿತವಾಗಿ ಮಾಡಿಕೊಡುವುದಾಗಿ ಸಂಸ್ಥೆ ಹೇಳಿದೆ.
ಈ ಕುರಿತು ಪವರ್ಸ್ ಲಾ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದು, 2020 ಭಯಾನಕ ವರ್ಷವಾಗಿದೆ. ಕರೋನಾ ದೇಶವನ್ನು ಎರಡು ಭಾಗಗಳಾಗಿ ವಿಭಜಿಸಿ, ಆರ್ಥಿಕತೆ ಕುಸಿದಿದೆ.
ಈ ಹಿನ್ನೆಲೆಯಲ್ಲಿ ನಾವು ಈ ವ್ಯಾಲೆಂಟೈನ್ಸ್ ಡೇ ಅಂಗವಾಗಿ ಅದೃಷ್ಟಶಾಲಿ ಸ್ಪರ್ಧಿಗೆ ಉಚಿತವಾಗಿ ವಿವಾಹ ವಿಚ್ಛೇದನ ಕೊಡಿಸಬೇಕೆಂದು ನಿರ್ಧರಿಸಿದ್ದೇವೆ.
ಯಾಕೆಂದ್ರೆ ವ್ಯಾಲೆಂಟೈನ್ಸ್ ಡೇಯಂತಹ ಹುಚ್ಚು ಸಂಸ್ಕøತಿಯ ಕಾರಣದಿಂದಾಗಿ, ಮನುಷ್ಯ ತನ್ನ ಆರ್ಥಿಕ ಸ್ಥಿತಿಯ ಬಗ್ಗೆ ಯೋಚಿಸದೇ ಪ್ರೀತಿಯಲ್ಲಿ ಬಿದ್ದು, ಮದುವೆ ಆಗಿ ಸಂಕಷ್ಟಗಳನ್ನ ಅನುಭವಿಸುತ್ತಾರೆ.
ಇದಲ್ಲದೇ ಬೇರೆ ಕಾರಣಗಳಿಂದಲೂ ಒಬ್ಬರನ್ನೊಬ್ಬರು ಬಿಟ್ಟು ಹೋಗಲು ಇಚ್ಛಿಸುತ್ತಾರೆ. ಅಂತವರಲ್ಲಿ ಒಬ್ಬರನ್ನು ಸೆಲೆಕ್ಟ್ ಮಾಡಿ ಉಚಿತವಾಗಿ ವಿಚ್ಛೇದನ ಕೊಡಿಸುವುದಾಗಿ ಹೇಳಿದೆ.
ಅಲ್ಲದೆ ವಿಚ್ಛೇದನದಲ್ಲಿ ಆಸಕ್ತಿ ಇರುವವರು ತಮ್ಮ ವಿಚ್ಛೇದನಕ್ಕೆ ಕಾರಣ ತಿಳಿಸಿ ಕಂಪನಿಗೆ ಇ ಮೇಲ್ ಮಾಡುವಂತೆ ತಿಳಿಸಿದೆ.
ಅಷ್ಟೇ ಅಲ್ಲ, ಪತಿ-ಪತ್ನಿ ವಿಚ್ಛೇದನಕ್ಕೆ ಸಿದ್ಧರಿರಬೇಕು. ಮತ್ತು ಮಕ್ಕಳು ಇರಬಾರದು. ಫೆಬ್ರವರಿ 19ರಂದು ವಿಜೇತರನ್ನು ಘೋಷಿಸಲಾಗುವುದು ಎಂದು ತಿಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









