ಭಾರತೀಯ ಕ್ರಿಕೆಟಿಗರನ್ನ ನಾಯಿಗೆ ಹೋಲಿಸಿದ ಕಂಗನಾ..!
ದೆಹಲಿಯಲ್ಲಿ ರೈತರ ಪ್ರತಿಭಟನೆ ಬಗ್ಗೆ ಪಾಪ್ ಸಿಂಗರ್ ರಿಹಾನಾ ಟ್ವೀಟ್ ಮಾಡುತ್ತಿದ್ದಂತೆ ದೇಶದಾತ್ಯಂತ ಅನ್ನದಾತ ಪ್ರತಿಭಟನೆಯ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ರಿಹಾನಾ ಟ್ವೀಟ್ ಗೆ ಭಾರತದ ಅನೇಕ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಒಗ್ಗಟ್ಟಿನ ಸಂದೇಶವನ್ನ ಸಾರುತ್ತಿದ್ದಾರೆ. ಈ ಅಭಿಯಾನಕ್ಕೆ ಸ್ಟಾರ್ ಕ್ರಿಕೆಟಿಗರೂ ಸಾಥ್ ನೀಡಿದ್ದು ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ಕೊಹ್ಲಿ, ರಹಾನೆ, ರೋಹಿತ್ ಶರ್ಮಾ ಸೇರಿದಂತೆ ಅನೇಕರು ನಾವೆಲ್ಲ ಒಂದಾಗಿದ್ದೇವೆ ಎಂದು ಟ್ವೀಟ್ ಮಾಡುತ್ತಿದ್ದಾರೆ.
ಆದ್ರೆ ಈ ಮಧ್ಯೆ ನಟಿ, ಕಾಂಟ್ರವರ್ಸಿ ಕ್ವೀನ್ ಕಂಗನಾ, ಕ್ರಿಕೆಟಿಗರು ಟ್ವೀಟ್ ಗೆ ರೀ ಟ್ವೀಟ್ ಮಾಡಿ ನಾಯಿಗಳಿಗೆ ಹೋಲಿಸಿದ್ದಾರೆ.
ಹೌದು..! ರೈತರ ಪ್ರತಿಭಟನೆ ವಿಚಾರವಾಗಿ ಟ್ವಿಟ್ಟರ್ ನಲ್ಲಿ ರೋಹಿತ್ ಶರ್ಮಾ, ಒಗ್ಗಟ್ಟಾಗಿ ಇದ್ದಾಗ ಪ್ರತಿಬಾರಿಯೂ ಭಾರತ ಬಲಿಷ್ಠ ರಾಷ್ಟ್ರ ಎಂದು ತೋರಿಸಿಕೊಂಡಿದೆ. ನಮ್ಮ ದೇಶದಲ್ಲಿ ರೈತರ ಪಾತ್ರ ಪ್ರಮುಖವಾಗಿದೆ. ಎಲ್ಲರೂ ತಮ್ಮ ಪಾತ್ರದ ಮೂಲಕ ಈ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ ಎಂದು ಬರೆದುಕೊಂಡಿದ್ದರು. ಇದಕ್ಕೆ ರೀ ಟ್ವೀಟ್ ಮಾಡಿರುವ ಸ್ವಯಂ ಘೋಷಿತ ಹೋರಾಟಗಾರ್ತಿ, ಕಂಗನಾ, ಯಾಕೆ ಈ ಭಾರತೀಯ ಕ್ರಿಕೆಟಿಗರು ಅಗಸನ ನಾಯಿಯಂತೆ ಆಡುತ್ತಾರೆ..? ಮನೆಗೂ ಉಪಯೋಗವಿಲ್ಲ… ಹೊರಗಡೆಯೂ ಪ್ರಯೋಜನಕ್ಕೆ ಬರೋದಿಲ್ಲ. ರೈತರ ಒಳಿತಿಗಾಗಿಯೇ ಮಾಡಿರುವ ಕಾನೂನನ್ನ ಅವರೇಕೆ ವಿರೋಧಿಸ್ತಾರೆ..? ಈ ಉಗ್ರರು ದೇಶದಲ್ಲಿ ಶಾಂತಿ ಕದಡುತ್ತಿದ್ದಾರೆ. ಇದನ್ನೆಲ್ಲ ಹೇಳಬೇಕು ನೀವು… ಯಾಕೆ ಅಷ್ಟೊಂದು ಭಯಾನಾ..? ಎಂದು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಪ್ರಚೋದನಕಾರಿಯಾಗಿರುವ ಹಿನ್ನೆಲೆ ಈ ಟ್ವೀಟ್ ಅನ್ನು ಟ್ವಿಟ್ಟರ್ ಇಂಡಿಯಾ ಅಳಿಸಿ ಹಾಕಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಟ್ವಿಟರ್ ವಕ್ತಾರ, ‘ಕಂಗನಾ ಅವರು ಟ್ವಿಟರ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಅವರ ಖಾತೆಯಲ್ಲಿ ಪೆÇೀಸ್ಟ್ ಮಾಡಲಾಗಿದ್ದ ಟ್ವೀಟ್ಗಳನ್ನು ಅಳಿಸಿಹಾಕಲಾಗಿದೆ’ ಎಂದು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









