ಪಾಕಿಸ್ತಾನಕ್ಕೆ ಮರ್ಮಾಘಾತ : ಇರಾನ್ ನಿಂದ ಮತ್ತೊಂದು Surgical Strike..!
ಭಾರತದ ಬೆನ್ನಲ್ಲೇ ಪಾಕಿಸ್ತಾನದ ಮೇಲೆ ಇರಾನ್ ಭಯೋತ್ಪಾದಕ ಗುಂಪುಗಳನ್ನು ಗುರಿಯಾಗಿಸಿಕೊಂಡು ಸರ್ಜೀಕಲ್ ಸ್ಟ್ರೈಕ್ ನಡೆಸಿದೆ ಎನ್ನಲಾಗಿದೆ. ಈ ಮೂಲಕ ಕಾರ್ಯಾಚರಣೆಯನ್ನು ನಡೆಸಿದ 3ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಇರಾನ್ ಪಾತ್ರವಾಗಿದೆ. ಇದೇ ವೇಳೆ ಸುಮಾರು 3 ವರ್ಷಗಳ ಹಿಂದೆ ಒತ್ತೆಯಾಳುಗಳಾಗಿರಿಸಲ್ಪಟ್ಟ ಇಬ್ಬರು ಇರಾನಿ ಸೈನಿಕರನ್ನು ಮುಕ್ತಗೊಳಿಸಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಫೆಬ್ರವರಿ 2 ರಂದು ಈ ಪ್ರದೇಶದಲ್ಲಿ ನಿಯೋಜಿಸಲಾದ ಪಾಕಿಸ್ತಾನ ಮಿಲಿಟರಿ ಘಟಕಗಳಿಗೆ ಯಾವುದೇ ಮುನ್ಸೂಚನೆಯಿಲ್ಲದೆ ಈ ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಭಯೋತ್ಪಾದಕ ಗುಂಪುಗಳನ್ನು ರಕ್ಷಿಸುತ್ತಿದ್ದ ಹಲವು ಮಂದಿ ಸೇನಾಧಿಕಾರಿಗಳನ್ನು ಬಲಿಪಡೆದಿರುವ ಮಾಹಿತಿ ಸಿಕ್ಕಿದೆ. ಇರಾನ್ ನ ಗಣ್ಯ ಕ್ರಾಂತಿಕಾರಿ ಗಾರ್ಡ್‌ಗಳು ಪಾಕಿಸ್ತಾನದಲ್ಲಿ ಗುಪ್ತಚರ ಆಧಾರಿತ ಸ್ಪೆಷಲ್ ಓಪ್ಸ್ ಡೀಪ್ ಅನ್ನು ತನ್ನದೇ ಆದ ಇಬ್ಬರು ಸೈನಿಕರನ್ನು ಮುಕ್ತಗೊಳಿಸಿದೆ ಎಂದು ವರದಿಯಾಗಿದೆ. ಇದೇ ವೇಳೆ ಇಬ್ಬರು ಗಡಿ ಕಾವಲುಗಾರರನ್ನು ಸಹ ರಕ್ಷಿಸಲಾಗಿದೆ ಎಂದು ಹೇಳಲಾಗಿದೆ. ಬುಧವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಹಲವಾರು ಪಾಕಿಸ್ತಾನಿ ಸೈನಿಕರು ಕೂಡ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಾಮ ಮಂದಿರ ನಿರ್ಮಾಣಕ್ಕೆ `ಜಾಮಿಯಾ ಮಸೀದಿ’ಯಿಂದ ದೇಣಿಗೆ..!
ಅಪ್ರಾಪ್ತೆ ಸ್ವಇಚ್ಛೆಯಿಂದ ವಿವಾಹವಾದ್ರು, ಗಂಡನೊಂದಿಗೆ ವಾಸಿಸಲು ಸಾಧ್ಯವಿಲ್ಲ – ನ್ಯಾಯಾಲಯ..!
ಚೀನಾದಲ್ಲಿ ಸಿಲುಕಿರುವ ಭಾರತದ ನಾವಿಕರ ಬಿಡುಗಡೆಗೆ ಕೊನೆಗೂ ಚೀನಾ ಒಪ್ಪಿಗೆ
SBIನಲ್ಲಿ ಅಪ್ರಾಪ್ತ ಮಕ್ಕಳಿಗೆ ಖಾತೆ ತೆರೆಯುವ ಅವಕಾಶ : ಇಲ್ಲಿದೆ ಸಂಪೂರ್ಣ ಮಾಹಿತಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








