‘ಸಲಾರ್’ ಚಿತ್ರ ‘ಉಗ್ರಂ’ ರೀಮೇಕಾ..? ಏನ್ ಹೇಳ್ತಾರೆ ‘ಕಿಂಗ್ ಮೇಕರ್’..!
ಬಾಹುಬಲಿ ಪ್ರಭಾಸ್ ಹಾಗೂ ಕಿಂಗ್ ಮೇಕರ್ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಈಗಾಗಲೇ ಸೆಟ್ಟೇರಿರುವ ಬಹುನಿರೇಕ್ಷೆಯ ಸಿನಿಮಾ ಸಲಾರ್. ಕೆಜಿಎಫ್ ಟೀಂ, ಹೊಂಬಾಳೆ ಪ್ರಡೊಕ್ಷನ್ ನಲ್ಲಿ ಮೂಡಿಬರುತ್ತಿರುವ ಚಿತ್ರ ಸಾಕಷ್ಟು ಕುತೂಹಲ ಹೈಪ್ ಕ್ರಿಯೇಟ್ ಮಾಡಿದೆ. ಕ್ರೇಜ್ ಹುಟ್ಟುಹಾಕಿದೆ. ನಿರೀಕ್ಷೆ ಮೂಡಿಸಿದೆ.
ಆದ್ರೆ ಕಾಮನ್ ಆಗಿ ಸಿನಿಮಾ ಅನೌನ್ಸ್ ಆದಾಗಿನಿಂದಲೂ , ಟೈಟಲ್, ಬಿಜಿ, ಪೋಸ್ಟರ್ ನಿಂದ ಈ ಸಿನಿಮಾವನ್ನ ಪ್ರಶಾಂತ್ ನೀಲ್ ಅವರ ನಿರ್ದೇಶನದ ಮೊದಲ ಸೂಪರ್ ಹಿಟ್ ಸಿನಿಮಾ ‘ಉಗ್ರಂ’ಗೆ ತುಲನೆ ಮಾಡಿಯೇ ಮಾತನಾಡಲಾಗ್ತಿದೆ. ಉಗ್ರಂ ರೀತಿಯೇ ಇರಬಹುದಾ, ಸೀಕ್ವೆಲ್ ಇರಬಹುದಾ, ರೀಮೇಕ್ ಇರಬಹುದಾ ಎಂಬ ಅನುಮಾನಗಳು ಚರ್ಚೆಗಳು ಪ್ರಾರಂಭವಾಗಿದೆ.
ಹೌದು ಉಗ್ರಂ ಸಿನಿಮಾವನ್ನೇ ‘ಸಲಾರ್’ ಹೆಸರಲ್ಲಿ ತೆಲುಗಿಗೆ ರೀಮೇಕ್ ಮಾಡಲಾಗುತ್ತಿದೆ ಎಂಬ ಸುದ್ದಿಗಳು ತೆಲುಗು ಮಾಧ್ಯಮಗಳಲ್ಲಿ ಕೆಲ ದಿನಗಳಿಂದಲೂ ಹರಿದಾಡುತ್ತಿತ್ತು. ಇದಕ್ಕೆ ಪ್ರಶಾಂತ್ ನೀಲ್ ಇದೀಗ ಸ್ಪಷ್ಟನೆ ನೀಡಿದ್ದಾರೆ.
ಬೇಬಿ ಬಂಪ್ ಪ್ರದರ್ಶಿಸಿದ ನಟಿ ಕರೀನಾ ಕಪೂರ್..!
ತೆಲುಗು ಮಾಧ್ಯಮದ ಸಂದರ್ಶವೊಂದ್ರಲ್ಲಿ ಈ ಬಗ್ಗೆ ಮಾತನಾಡಿರೋ ಪ್ರಶಾಂತ್ ನೀಲ್ ಅವರು , ಪ್ರಭಾಸ್ ಗಾಗಿ ನಿರ್ದೇಶನ ಮಾಡಲಾಗುತ್ತಿರುವ ‘ಸಲಾರ್’ ಸಿನಿಮಾ ಉಗ್ರಂ ಸಿನಿಮಾದ ರೀಮೇಕ್ ಅಲ್ಲ. ಅಷ್ಟು ಮಾತ್ರವೇ ಅಲ್ಲದೆ, ಯಾವ ಬಾಲಿವುಡ್ ಸಿನಿಮಾದ ರೀಮೇಕ್ ಸಹ ಅಲ್ಲ ಎಂದು ಖಡಕ್ ಆನ್ಸರ್ ಕೊಡೋ ಮೂಲಕ ವದಂತಿಗಳಿಗೆ ತೆರೆ ಎಲೆದಿದ್ದಾರೆ,
ಮ್ಯಾನ್ಮಾರ್ ನಲ್ಲಿ ತುರ್ತು ಪರಿಸ್ಥಿತಿ , ಸೇನಾ ಸರ್ಕಾರ: ಹೇಗಾಯ್ತು ,ಯಾಕಾಯ್ತು : ಸಂಪೂರ್ಣ ಮಾಹಿತಿ..!
‘ಸಲಾರ್ ಸಿನಿಮಾದ ಕತೆ ಪ್ರಭಾಸ್ ಗಾಗಿಯೆಂದೇ ಬರೆಯಲಾದ ಕತೆ. ಒರಿಜಿನಲ್ ಐಡಿಯಾವೊಂದನ್ನು ಪ್ರಭಾಸ್ ಗೆ ತಕ್ಕಂತೆ ಚಿತ್ರಕತೆಯಾಗಿ ರೂಪಿಸಿ ಇದೀಗ ಸಿನಿಮಾ ಮಾಡಲಾಗುತ್ತಿದೆ’ ಎಂದು ಪ್ರಶಾಂತ್ ನೀಲ್ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನಕ್ಕೆ ಮರ್ಮಾಘಾತ : ಇರಾನ್ ನಿಂದ ಮತ್ತೊಂದು Surgical Strike..!
ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಮಸಿ ಬಳೆಯುವ ಷಡ್ಯಂತ್ರ – ಗ್ರೇಟಾ ಥನ್ ಬರ್ಗ್ ಟ್ವೀಟ್: ಟೂಲ್ ಕಿಟ್ ವಿರುದ್ಧ FIR
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel