ಕಂಗನಾ ರಣಾವತ್ ಧಾಕಡ್ ಸಿನಿಮಾದ ಬಜೆಟ್ ಎಷ್ಟು ಗೊತ್ತಾ..!
ಬಾಲಿವುಡ್ ನ ಕಾಂಟ್ರವರ್ಸಿ ಕ್ವೀನ್ ಅಂತಲೇ ಫೇಮಸ್ ಆಗಿರೋ ಕಂಗನಾ ರಣಾವತ್ ಅವರು ಸಿನಿಮಾ ಸುದ್ದಿಗಿಂತ ಜಾಸ್ತಿ ಬೇಡದೇ ಇರೋ ವಿಚಾರವಾಗಿ ವಿವಾದಾತ್ಮಕ ಹೇಳಿಕೆಗಳನ್ನೇ ನೀಡುತ್ತಾ ಗಮನ ಸೆಳೆಯುತ್ತಿರುವುದು ಹೆಚ್ಚು. ಆದ್ರೆ ಇದರ ನಡುವೆಯೂ ಸಿನಿಮಾಗಳ ಅಪ್ ಡೇಟ್ಸ್ ನೀಡ್ತಾ ನೆಟ್ಟಿಗರನ್ನ ಆಗಾಗ ಬೆರಗುಗೊಳಿಸ್ತಿರ್ತಾರೆ. ಹೌದು ತಮ್ಮ ಮುಂಬರುವ ಆಕ್ಷನ್ ಹಿಟ್ ಸಿನಿಮಾವಾಗಿರುವ ಧಾಕಡ್ ನಲ್ಲಿ ಬರುವ ಒಂದು ಆಕ್ಶನ್ ಸೀನ್ ಬಗ್ಗೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಕುತೂಹಲ ಮೂಡಿಸಿದ್ದಾರೆ. ಕಂಗನಾ ರಣಾವತ್ ತಮ್ಮ ಮುಂದಿನ ಚಿತ್ರ ಧಾಕಡ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಇದು ಒಂದು ಸ್ಪೈ ಆಕ್ಷನ್ ಸಿನಿಮಾ ಆಗಿದೆ. ಇದರಲ್ಲಿ ಕಂಗನಾ ಆಕ್ಷನ್ ಸೀನ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ತಮ್ಮ ಆಕ್ಷನ್ ಸೀನ್ ಚಿತ್ರೀಕರಿಸಲು ಭಾರೀ ಮೊತ್ತವನ್ನ ಚಿತ್ರತಂಡ ವ್ಯಯಿಸಿದೆ ಎಂದು ಕಂಗನಾ ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಗೆ ಎಂಟ್ರಿಯಾಗ್ತಿದ್ದಾರಾ ‘ಬ್ರಹ್ಮಗಂಟು ಗೀತಾ’..!
ಕಂಗನಾ ರಣಾವತ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದು, ಧಾಕಡ್ ಸಿನಿಮಾದ ಒಂದೇ ಒಂದು ಆಕ್ಷನ್ ಸೀನ್ಗಾಗಿ ಬರೋಬ್ಬರಿ 25 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣ ಖರ್ಚು ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಯಾವ ನಿರ್ದೇಶಕನೂ ತರಬೇತಿ ಅವಧಿಗೆ ಇಷ್ಟೊಂದು ಸಮಯ ಹಾಗೂ ಮಹತ್ವವನ್ನ ನೀಡಿದ್ದನ್ನು ನಾನು ಹಿಂದೆಂದೂ ಕಂಡೇ ಇಲ್ಲ. ನಾಳೆ ರಾತ್ರಿಯಿಂದ ಆಕ್ಷನ್ ಸೀನ್ ಒಂದರ ಶೂಟಿಂಗ್ ನಡೆಯಲಿದೆ. ಆದರೆ ನಾನು ಇದರ ತಯಾರಿಯನ್ನೇ ಕಂಡೇ ಆಶ್ಚರ್ಯ ಚಕಿತಳಾಗಿದ್ದೇನೆ. ಒಂದು ಆಕ್ಷನ್ ಸೀನ್ಗಾಗಿ ಬರೋಬ್ಬರಿ 25 ಕೋಟಿ ರೂಪಾಯಿ ಖರ್ಚು ಮಾಡಲಾಗ್ತಿದೆ ಎಂದು ಬರೆದುಕೊಂಡಿದ್ದಾರೆ .
ಪ್ರಭಾಸ್ ನ ಮೈಕಟ್ಟು, ಧೈರ್ಯ, ಶೌರ್ಯ ನೋಡಿದ್ದೀರಾ… ಈಗ ಹೃದಯ ನೋಡುವ ಸಮಯ : ರಾಧೆ-ಶ್ಯಾಮ್ ‘ಪ್ರೀ-ಟೀಸರ್’..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel