ರಿಯಲ್ ಸ್ಟಾರ್ ಉಪೇಂದ್ರ ಅವರ ‘ಬುದ್ಧಿವಂತ -2’ಗೆ ವಿಲ್ಲನ್…. ಶ್ರೀನಗರ ಕಿಟ್ಟಿ!
ರಿಯಲ್ ಸ್ಟಾರ್ ಉಪೇಂದ್ರ ಅವರ ನಟನೆಯ ಬಹುನಿರೀಕ್ಷೆ ಚಿತ್ರ ಬುದ್ಧಿವಂತ 2 ಗೆ ಇದೀಗ ಕನ್ನಡದ ಮತ್ತೊಬ್ಬ ಖ್ಯಾತ ನಟನ ಎಂಟ್ರಿಯಾಗಿದೆ. ಹೌದು ಚಿತ್ರ ತಂಡ ಚಿತ್ರದ ವಿಲನ್ ಕುರಿತಾಗಿ ಹೊಸ ಮಾಹಿತಿಯನ್ನು ಬಹಿರಂಗಪಡಿಸಿದೆ. ಚಿತ್ರದಲ್ಲಿ ಶ್ರೀನಗರ ಕಿಟ್ಟಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆಂದು ಎಂದು ಮಾಹಿತಿ ನೀಡಿದೆ. ಈಗಾಗಲೇ ಶ್ರೀನಗರ ಕಿಟ್ಟಿಯವರು ನಟಿಸಬೇಕಿದ್ದ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಚಿತ್ರ ಆರಂಭದ ವೇಳೆ ವಿಲನ್ ಪಾತ್ರದಲ್ಲಿ ಆದಿತ್ಯಾ ಕಾಣಿಸಿಕೊಳ್ಳಲಿದ್ದಾರೆಂದು ಹೇಳಲಾಗುತ್ತಿತ್ತು. ಇದೀಗ ಶ್ರೀನಗರ ಕಿಟ್ಟಿ ನಟಿಸುತ್ತಿರುವುದು ಅಧಿಕೃತವಾಗಿದೆ.
ಕೊರೊನಾ ಸಂದರ್ಭದಲ್ಲಿ ಕಡಿಮೆಯಾಗಿಲ್ಲ ರಣವೀರ್ ಬ್ರ್ಯಾಂಡ್ ವಾಲ್ಯೂ : ಗಳಿಸಿದ್ದೆಷ್ಟು ಗೊತ್ತಾ..!
ಅಂದ್ಹಾಗೆ ಬುದ್ಧಿವಂತ 2 ಚಿತ್ರದ ಬಹುತೇಕ ಚಿತ್ರೀಕರಣವು ಈಗಾಗಲೇ ಪೂರ್ಣಗೊಂಡಿದ್ದು, ಹಾಡುಗಳ ಚಿತ್ರೀಕರಣವಷ್ಟೇ ಬಾಕಿಯಿದೆ. ಇತ್ತ ಕಿಟ್ಟಿ ಅವತಾರ್ ಪುರುಷ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಹೊರತಾಗಿಯು ಕೆಲ ಪ್ರಾಜೆಕ್ಟ್ ಗಳು ಅವರ ಕೈಲಿದೆ. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಟಿಆರ್. ಚಂದ್ರಶೇಖರ್ ಅವರು ಬುದ್ಧಿವಂತ-2 ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಚಿತ್ರದಲ್ಲಿ ಸೂಪರ್ ಸ್ಟಾರ್ ಉಪೇಂದ್ರ ಅವರು ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಮೇಘನಾ ರಾಜ್ ಮತ್ತು ಪಂಚತಂತ್ರ ಖ್ಯಾತಿಯ ಸೋನಾಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಕಂಗನಾ ರಣಾವತ್ ಧಾಕಡ್ ಸಿನಿಮಾದ ಬಜೆಟ್ ಎಷ್ಟು ಗೊತ್ತಾ..!
ಪ್ರಭಾಸ್ ನ ಮೈಕಟ್ಟು, ಧೈರ್ಯ, ಶೌರ್ಯ ನೋಡಿದ್ದೀರಾ… ಈಗ ಹೃದಯ ನೋಡುವ ಸಮಯ : ರಾಧೆ-ಶ್ಯಾಮ್ ‘ಪ್ರೀ-ಟೀಸರ್’..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








