ಉತ್ತರಾಖಂಡ್ ನಲ್ಲಿ ಹಿಮ ಸುನಾಮಿ : ಕೊಚ್ಚಿ ಹೋದ ಮನೆಗಳು, 150 ಮಂದಿ ನಾಪತ್ತೆ.
ಉತ್ತರಕಾಂಡ್: ಉತ್ತರಕಾಂಡ್’ನಲ್ಲಿ ಹಿಮಕುಸಿತವಾಗಿದ್ದು, ಧೌಲಿಗಂಗಾ ನದಿಯ ನೀರಿನ ಮಟ್ಟ ಹೆಚ್ಚಾಗಿ ಪ್ರವಾಹ ಉಂಟಾಗಿದೆ.
ಪರಿಣಾಮ ಅನೇಕ ಮನೆಗಳು ಕೊಚ್ಚಿಕೊಂಡು ಹೋಗಿದ್ದು, 150 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಚಮೋಲಿ ಜಿಲ್ಲೆಯ ತಪೋವನ್ ಪ್ರದೇಶದ ರೈನಿ ಗ್ರಾಮದಲ್ಲಿನ ವಿದ್ಯುತ್ ಯೋಜನೆಯ ಬಳಿ ಹಿಮಪಾತ ಸಂಭವಿಸಿದೆ.
ಪರಿಣಾಮ ಧೌಲಿಗಂಗಾ ನದಿಯಲ್ಲಿ ನೀರಿನ ಮಟ್ಟ ಹಠಾತ್ತನೆ ಏರಿಕೆಯಾಗಿ ಗ್ರಾಮಗಳತ್ತ ನುಗ್ಗಿಬಂದಿದೆ.
#WATCH | Water level in Dhauliganga river rises suddenly following avalanche near a power project at Raini village in Tapovan area of Chamoli district. #Uttarakhand pic.twitter.com/syiokujhns
— ANI (@ANI) February 7, 2021
ಈ ವೇಳೆ ಹಲವಾರು ಮನೆಗಳು ಕೊಚ್ಚಿ ಹೋಗಿದ್ದು, 150ಕ್ಕೂ ಜನರು ಕಾಣೆಯಾಗಿದ್ದಾರೆ ಎಂದು ಶಂಕಿಸಲಾಗ್ತಿದೆ.
ಋಷಿ ಗಂಗಾ ಯೋಜನೆಯ ಕಾರ್ಮಿಕರು ಸೇರಿ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗ್ತಿದೆ. ಇನ್ನು ಸ್ಥಳಕ್ಕೆ ರಕ್ಷಣೆ ಪಡೆಗಳು ಆಗಮಿಸಿದ್ದು, ರಕ್ಷಣಾ ಕಾರ್ಯ ಶುರುವಾಗಿದೆ.
ಇನ್ನು ಉತ್ತರಕಾಂಡ್’ನ ಐದು ಜಿಲ್ಲೆಗಳಲ್ಲಿ ಹೈ ಆಲರ್ಟ್ ಘೋಷಣೆ ಮಾಡಲಾಗಿದೆ. ಧೌಲಿ ಗಂಗಾ ನದಿಯ ತಟದಲ್ಲಿರುವ ಜನರ ಸ್ಥಳಾಂತರ ಕಾರ್ಯ ನಡೆಯುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel