ಕಾನ್ಪುರ : ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ದೇಶದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಇದರಿಂದಾಗಿ ಗಂಗಾನದಿಯ ನೀರು ತಿಳಿಯಾಗುತ್ತಿದ್ದು, ಗುಣಮಟ್ಟದಲ್ಲಿ ಶೇ.40ರಿಂದ 50 ರಷ್ಟು ಉತ್ತಮ ಮಟ್ಟಕ್ಕೆ ತಲುಪಿದೆ.
ಗಂಗಾ ಶುದ್ಧಗೊಳ್ಳುತ್ತಿರುವ ವಿಷಯವನ್ನು ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಪಿ.ಕೆ.ಮಿಶ್ರಾ ಅವರು ಬಹಿರಂಗಪಡಿಸಿದ್ದಾರೆ. ಕೊರೊನಾ ಸೋಂಕು ಕಾರಣ ಲಾಕ್ ಡೌನ್ ಆಗಿರುವುದರಿಂದ ಗಂಗಾ ನದಿಗೆ ಕೈಗಾರಿಕೆಗಳಿಂದ ಕಲುಷಿತ ದ್ರಾವಣ ಬರುವುದು ನಿಂತಿದೆ. ಈ ಕಾರಣಕ್ಕಾಗಿ ಗುಣಮಟ್ಟದಲ್ಲಿ ನೀರು 10ದಿನಕ್ಕೆ ಶೇ.50ರಷ್ಟು ಉತ್ತಮಮಟ್ಟಕ್ಕೆ ತಲುಪಿದೆ ಎಂದು ಮಿಶ್ರಾ ಅವರು ಹೇಳಿದ್ದಾರೆ.








