ಚಿತ್ರರಂಗದ ನೊಬೆಲ್ ಪ್ರಶಸ್ತಿ ಎಂದೇ ಕರೆಯಲ್ಪಡುವ ಪ್ರತಿಷ್ಠಿತ ಆಸ್ಕರ್ ೨೦೨೦ ಅವಾರ್ಡ್ಗಳನ್ನು ಸಾಧಕರಿಗೆ ನೀಡಲಾಗಿದೆ. ಈ ಬಾರಿ ಪ್ಯಾರಾಸೈಟ್, ೧೯೧೭ ಮತ್ತು ಜೋಕರ್ ಸಿನಿಮಾಗಳಿಗೆ ಪ್ರಶಸ್ತಿಗಳ ಸುರಿಮಳೆಯಾಗಿದೆ.ಕ್ಯಾಲಿಪೋರ್ನಿಯಾದಲ್ಲಿ ನಿನ್ನೆ ರಾತ್ರಿ ನಡೆದ ಅದ್ಧೂರಿ ವರ್ಣರಂಜಿತ ಸಮಾರಂಭದಲ್ಲಿ ಚಿತ್ರರಂಗದ ಸಾಧಕರಿಗೆ ೨೦೨೦ನೇ ಸಾಲಿನ ಆಸ್ಕರ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಇನ್ನು ಇಂತಹ ಸಮಾರಂಭಗಳಲ್ಲಿ ತಮ್ಮ ಆಕರ್ಷಕ ಉಡುಪು ಮತ್ತು ಮೈಮಾಟದಿಂದಲೇ ಎಲ್ಲರ ಕಣ್ಮನ ಸೆಳೆಯುತಿದ್ದ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಈ ಬಾರಿ ಸಮಾರಂಭಕ್ಕೆ ಗೈರಾಗಿದ್ದಾರೆ. ಈ ಬಗ್ಗೆ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ೨೦೧೬ ಮತ್ತು ೨೦೧೭ ವರ್ಷಗಳಲ್ಲಿ ಪಾಲ್ಗೊಂಡಿದ್ದ ಆಕರ್ಷಕ ಉಡುಪಿನ ಫೋಟೋ ಪೋಸ್ಟ್ ಮಾಡಿದ್ದಾರೆ.
ಹೌದು ನಾನು ಈ ವರ್ಷ ಪ್ರತಿಷ್ಠಿತ ಸಮಾರಂಭಕ್ಕೆ ತೆರಳಲಾಗಿಲ್ಲ. ಆದರೆ ನೇರಪ್ರಸಾರ ವೀಕ್ಷಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಪತಿ ನಿಕ್ ಜೋನಾಸ್ ಜತೆಗೂಡಿ ಇತ್ತೀಚೆಗೆ ನಡೆದ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ನೆನಪನ್ನೂ ಹಂಚಿಕೊಂಡಿದ್ದಾರೆ. ಅಲ್ಲದೇ ನನ್ನ ಉಡುಪು ಸಹಿತ ಹಲವು ವಿಷಯಗಳಲ್ಲಿ ಪರ – ವಿರೋಧ ಅಭಿಪ್ರಾಯ ಬರುತ್ತವೆ. ಎಲ್ಲವನ್ನೂ ನಾನು ಸಮಾನವಾಗಿ ಸ್ವೀಕರಿಸುತ್ತೇನೆ ಎಂದಿದ್ದಾರೆ.
Couldn’t make it to the #Oscars this year but I’ll be watching with you! 🎞 Lemme know who you’re rooting for! #PCOscarParty
— PRIYANKA (@priyankachopra) February 10, 2020