ಉತ್ತರಕಾಂಡ್ ನಲ್ಲಿ ಹಿಮಕುಸಿತ: 32 ಮೃತದೇಹ ಪತ್ತೆ, 206 ಮಂದಿ ನಾಪತ್ತೆ..!
ಉತ್ತರಕಾಂಡ್ : ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ಹಿಮಸ್ಫೋಟ ದುರಂತದಲ್ಲಿ ಸಾವನಪ್ಪಿದವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಈವರೆಗೂ ಸ207 ಮಂದಿ ನಾಪತ್ತೆಯಾಗಿದ್ದು, ಸ್ಥಳದಲ್ಲಿ ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲಕಾನಂದ ಮತ್ತು ದೌಲಿಗಂಗದಲ್ಲಿ ದುರಂತ ಸಂಭವಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಉತ್ತರರಾಂಡ್ ನಲ್ಲಿ ಹಿಮಕುಸಿತ : ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಸಿಬ್ಬಂದಿಗಳಿಂದ ಹರಸಾಹಸ..!
ಹಿಮಸ್ಫೋಟದಿಂದಾಗಿ ತಪೋವನ್ ಹೈಡ್ರೋಪವರ್ ಯೋಜನೆ ಮತ್ತು ರಿಷಿಗಂಗಾದ ಹೈಡೆಲ್ ಯೋಜನೆಗೂ ಹಾನಿಯಾಗಿದ್ದು, ಪ್ರವಾಹದ ಕಾರಣದಿಂದ ಹಲವು ಮನೆಗಳು ಕೊಚ್ಚಿಹೋಗಿವೆ. ಘಟನಾ ಸ್ಥಳದಲ್ಲಿ ಐಟಿಬಿಪಿ, ಎನ್ ಡಿಆರ್ ಎಫ್, ಸೇನೆ, ರಾಜ್ಯ ವಿಪತ್ತು ನಿರ್ವಹಣೆ ಪಡೆಯ ಸಾವಿರಾರು ಸಿಬ್ಬಂದಿ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಆದರೆ, ಸ್ಥಳದಲ್ಲಿ ಭಾರೀ ಕೆಸರು, ಹೂಳು, ತಾಪಮಾನ ಶೂನ್ಯದ ಆಸುಪಾಸಿಗೆ ಬಂದ ಕಾರಣ, ಸಿಬ್ಬಂದಿಳು ತಮ್ಮ ರಕ್ಷಣೆ ಮಾಡಿಕೊಳ್ಳಲು ಸಹ ಹರಸಾಹದ ಪಡುವಂತಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel