ಅಪ್ರಾಪ್ತೆ ಮೇಲೆ ಅತ್ಯಾಚಾರ , ಬ್ಲಾಕ್ ಮೇಲ್ : ಇಬ್ಬರ ಬಂಧನ..!
ಮಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಇಬ್ಬರು ಯುವಕರು ಅತ್ಯಾಚಾರಗೈದು ಬಳಿಕ ಮೊಬೈಲ್ ನಲ್ಲಿ ಆಕೆಯ ನಗ್ನ ಫೋಟೋಗಳನ್ನು ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡಿರುವ ಪ್ರಕರಣ ಮಂಗಳೂರಿನ ಬಂಟ್ವಾಳದಲ್ಲಿ ಬೇಲಕಿಗೆ ಬಂದಿದೆ.
ಈ ಸಂಬಂಧ ಇಬ್ಬರು ಯುವಕರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬೋಳಂತೂರು ಗ್ರಾಮದ ಅಬೂಬಕರ್ ಸಿದ್ದೀಕ್ ಮತ್ತು ಚಪ್ಪಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಬೋಳಂತೂರು ಗ್ರಾಮದ ಸಂತ್ರಸ್ತ ಬಾಲಕಿಯನ್ನು ಆಕೆಯ ನೆರೆಮನೆಯವನಾದ ಆರೋಪಿ ಅಬೂಬಕರ್ ಸಿದ್ದೀಕ್ ಮತ್ತು ಆತನ ಸ್ನೇಹಿತ ಚಪ್ಪಿ ಪುಸಲಾಯಿಸಿ ಎಳೆದೊಯ್ದು ಜ.25ರಂದು ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಲಾಗಿದೆ.
ದೇಶದಲ್ಲಿ ಒಂದೇ ದಿನ 11,067 ಹೊಸ ಕೇಸ್ ಗಳು ಪತ್ತೆ..!
ಜ.25ರಂದು ರಾತ್ರಿ ಬಾಲಕಿಗೆ ಕರೆ ಮಾಡಿರುವ ಸಿದ್ದೀಕ್ ನಿನ್ನೊಂದಿಗೆ ಮಾತಾಡಬೇಕು ಮನೆಯ ಹೊರಗೆ ಬಾ ಎಂದು ಕರೆದಿದ್ದು, ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಬಾಲಕಿಯ ನಗ್ನ ಪೋಟೋಗಳನ್ನು ತೆಗೆದಿದ್ದು, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಪೋಟೋಗಳನ್ನು ಬಹಿರಂಗಪಡಿಸುವುದಾಗಿ ಹೆದರಿಸಿದ್ದಾರೆ. ಅಲ್ಲದೆ ಇದೇ ವಿಚಾರ ಮುಂದಿಟ್ಟು ಮತ್ತೆ ಬಾಲಕಿಯನ್ನು ಕರೆಯುತ್ತಿದ್ದಾರೆ ಎಂದು ಕುಟುಂಬಸ್ಥರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರೂ ಕಾಮುಕರನ್ನ ಬಂಧಿಸಿದ್ದಾರೆ.
ಕೇಂದ್ರ ಸರ್ಕಾರದ ಖಡಕ್ ಸೂಚನೆಗೆ ಬೆಚ್ಚಿಬಿದ್ದ ಟ್ವಿಟ್ಟರ್ – 700 ಕ್ಕೂ ಅಧಿಕ ಅಕೌಂಟ್ ಗಳು ಬ್ಲಾಕ್
ದೇಶದಲ್ಲಿ ಒಂದೇ ದಿನ 11,067 ಹೊಸ ಕೇಸ್ ಗಳು ಪತ್ತೆ..!
ಉತ್ತರಕಾಂಡ್ ನಲ್ಲಿ ಹಿಮಕುಸಿತ : ಬೇಸರ ವ್ಯಕ್ತಪಡಿಸಿದ ಅಮೆರಿಕಾ..!
ಉತ್ತರಕಾಂಡ್ ನಲ್ಲಿ ಹಿಮಕುಸಿತ : ದುರಂತಕ್ಕೆ ವಿಕಿರಣ ಕಾರಣ..? ಸ್ಥಳೀಯರ ಶಂಕೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel