ಮಂಗಳೂರು : ಇಲ್ಲಿಯ ತನಕ ದೇಶದಲ್ಲಿ ಕೊರೊನಾ ಸೋಂಕಿತರ ಅಂಕಿಅಂಶಗಳನ್ನು ಗಮನಿಸಿದ್ರೆ.. ಶ್ರೀಮಂತರಿಗೆ ಮಾತ್ರವೇ ಕೊರೊನಾ ಬಂದಿರೋದು ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ಇಂದು ಉಳ್ಳಾಲದಲ್ಲಿ ಪೌರ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಖಾದರ್, ಕೊರೊನಾ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ಇಡೀ ದೇಶದಲ್ಲಿ ನಿಮ್ಮಂತ ಬಡವರಿಗೆ, ಪೌರ ಕಾರ್ಮಿಕರಿಗೆ ಯಾರಿಗೂ ಇದುವರೆಗೆ ಕೊರೊನಾ ಬಂದಿಲ್ಲ. ಬಂದಿರೋದು ಎಲ್ಲರಿಗೂ ವಿಮಾನ ಯಾನದಲ್ಲಿ ಪ್ರಯಾಣ ಮಾಡಿದವರಿಗೆ, ನಮ್ಮಂತ ರಾಜಕಾರಣಿಗಳಿಗೆ ಮಾತ್ರವೇ. ಇದುವರೆಗೆ ಎಲ್ಲಿಯೂ ಬಡವರಿಗೆ ಕೊರೊನಾ ಬಂದಿಲ್ಲ. ಬರೋದು ಬೇಡ ಎಂದು ಧೈರ್ಯ ತುಂಬಿದರು.
ಇದೇ ವೇಳೆ ಪೌರ ಕಾರ್ಮಿಕರಿಗೆ ಕೆಲ ಸಲಹೆಗಳನ್ನು ನೀಡಿದ ಖಾದರ್, ಶುಚಿತ್ವವನ್ನು ಕಾಪಾಡಿಕೊಳ್ಳಿ, ಸಾಮಾಜಿಕ ಅಂತರದೊಂದಿಗೆ ಕೆಲಸ ಮಾಡಿ. ಮಾಸ್ಕ್ ಕೊಟ್ಟಿದ್ದಾರೆ. ಮಾಸ್ಕ್ ಬಳಸಿಕೊಂಡು ವರ್ಕ್ ಮಾಡಿ ಎಂದರು.








