ಅಯ್ಯಯ್ಯೋ ಅನ್ಯಾಯ : ಮನೆ, ರಸ್ತೆ ಬಳಿ ಗಾಡಿ ಪಾರ್ಕಿಂಗ್ ಗೆ ಶುಲ್ಕ
ಬೆಂಗಳೂರು : ಈಗಾಗಲೇ ಆ ಟ್ಯಾಕ್ಸು.. ಈ ಟ್ಯಾಕ್ಸು ಅಂತಾ ಕಟ್ಟಿ ಹೈರಾಣಾಗಿರುವ ರಾಜ್ಯ ರಾಜಧಾನಿ ಮಂದಿಗೆ ಮತ್ತೊಂದು ಶಾಕಿಂಗ್ ಸುದ್ದಿ ಕಾದಿದೆ. ಮನೆ ಮತ್ತು ರಸ್ತೆ ಬದಿ ಬಳಿ ನೀವು ವಾಹನ ನಿಲ್ಲಿಸಲು ಶುಲ್ಕ ಪಾವತಿಸಬೇಕಾದ ದಿನ ಬರಲಿದೆ.
ಕೇಂದ್ರ ಸರ್ಕಾರದ ನೀತಿಯ ಅನುಸಾರ ಹೊಸ ಪಾಕಿರ್ಂಗ್ ನೀತಿಯಂತೆ ನಗರ ಭೂ ಸಾರಿಗೆ ನಿರ್ದೇಶನಾಲಯ ರೂಪಿಸಿರುವ ನೂತನ ಪಾಕಿರ್ಂಗ್ ನೀತಿಯಲ್ಲಿ ಹಲವು ಅಂಶಗಳನ್ನ ಶಿಫಾರಸು ಮಾಡಲಾಗಿದೆ.
ರಾಜ್ಯ ಸರ್ಕಾರದ ನಗರ ಅಭಿವೃದ್ಧಿ ಇಲಾಖೆಯು ಈ ಹೊಸ ನೀತಿಯ ಕರಡನ್ನ ಅಂಗೀಕರಿಸಿದೆ. ಇನ್ನು ಕೆಲವೇ ತಿಂಗಳಲ್ಲಿ ಇದು ಬೆಂಗಳೂರಿನಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ.
ಹೊಸ ಪಾಕಿರ್ಂಗ್ ನೀತಿಯ ಕರಡು ಪ್ರತಿಯಲ್ಲಿರುವ ಅಂಶಗಳೇನು ಅಂತಾ ನೋಡೊದಾದ್ರೆ…
* ಜನರು ರಸ್ತೆ ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡಲು ಶುಲ್ಕ : ಇದು ವಾಣಿಜ್ಯ ಸ್ಥಳಗಳಲ್ಲಿ ಹೆಚ್ಚು ಇರುತ್ತದೆ. ಈ ಶುಲ್ಕವನ್ನ ಗಂಟೆಯ ಲೆಕ್ಕದಲ್ಲಿ ವಿಧಿಸಲಾಗುತ್ತದೆ.
* ಮನೆ ಬಳಿ ವಾಹನ ನಿಲ್ಲಿಸೋಕು ಶುಲ್ಕ : ವಸತಿ ಪ್ರದೇಶಗಳಲ್ಲಿ ಪಾಕಿರ್ಂಗ್ ಜಾಗವನ್ನ ನಿರ್ಮಿಸಿ ಅಲ್ಲಿ ಹಣ ಪಾವತಿಸಿ ವಾಹನಗಳನ್ನ ನಿಲ್ಲಿಸಲು ಅವಕಾಶ ಮಾಡಿಕೊಡುವ ಯೋಜನೆ ಇದೆ. ಆಯಾಯ ನಗರ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಸೂಚಿಸಲಾಗಿದೆ.
* ನಿರ್ದಿಷ್ಠ ಹಣ ತೆತ್ತು ಪಾಕಿರ್ಂಗ್ ಪರ್ಮಿಟ್ : ಜನರು ಪಾಸ್ ನಂತೆ ಇಂದಿಷ್ಟು ಹಣ ನೀಡಿ ನಿರ್ದಿಷ್ಠ ಸ್ಥಳಗಳಲ್ಲಿ ಪಾರ್ಕಿಂಗ್ ಪರ್ಮಿಟ್ ಪಡೆಯಬಹುದು. ಸಣ್ಣ ಕಾರುಗಳಿಗೆ ವಾರ್ಷಿಕ 1 ಸಾವಿರ. ದೊಡ್ಡ ಕಾರುಗಳಿಗೆ 5 ಸಾವಿರ.
ದ್ವಿಚಕ್ರ ವಾಹನಗಳಿಗೆ ವಿನಾಯಿತಿ ಸಾಧ್ಯತೆ. ಫೂಡ್ ಡೆಲಿವರಿ ಬಾಯ್ಸ್, ಕೊರಿಯರ್ ಬಾಯ್ಸ್ ಇತ್ಯಾದಿ ಚಲನೆಯಲ್ಲಿರುವ ವಾಹನ ಸವಾರರಿಗೆ ಒಂದಷ್ಟು ರಿಯಾಯಿತಿಗಳು ಸಿಗಬಹುದು. ಪಾಕಿರ್ಂಗ್ ಪರ್ಮಿಟ್ ನ ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕ ಪಾಸ್ ಗಳನ್ನ ನೀಡಲಾಗುತ್ತದೆ.
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಇನ್ನು ಈ ಪಾರ್ಕಿಂಗ್ ನೀತಿಗೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ಕೊರೊನಾ ಸಂಕಷ್ಟದಿಂದ ಜನರು ಹೈರಾಣಾಗಿದ್ದಾರೆ. ಈ ಸಮಯದಲ್ಲಿ ಪಾಕಿರ್ಂಗೂ ದುಬಾರಿ ಶುಲ್ಕ ಹೇರುವುದು ಅನ್ಯಾಯ ಎಂದು ನಗರ ವಾಸಿಗಳು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel