ವಿರಾಟ್ ಕೊಹ್ಲಿಯೇ ನಮ್ಮ ನಾಯಕ.. ಈ ಬಗ್ಗೆ ಸುಮ್ಮನೆ ವಿವಾದ ಬೇಡ- ಅಜಿಂಕ್ಯಾ ರಹಾನೆ
ವಿರಾಟ್ ಕೊಹ್ಲಿಯೇ ನಮ್ಮ ನಾಯಕ. ಕೊಹ್ಲಿಯವರೇ ನಾಯಕನಾಗಿ ಮುಂದುವರಿಯುತ್ತಾರೆ. ಇದ್ರ ಬಗ್ಗೆ ಅನಗತ್ಯ ಚರ್ಚೆ ಮಾಡುವುದು ಬೇಡ ಎಂದು ಟೀಮ್ ಇಂಡಿಯಾದ ಉಪ ನಾಯಕ ಅಜಿಂಕ್ಯಾ ರಹಾನೆ ಖಡಕ್ ಆಗಿಯೇ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಜಿಂಕ್ಯಾ ರಹಾನೆ, ಟೀಮ್ ಇಂಡಿಯಾದ ನಾಯಕತ್ವದ ಬದಲಾವಣೆಯ ಬಗ್ಗೆ ಕೇಳಿ ಬರುತ್ತಿರುವ ಮಾತುಗಳಿಗೆ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ನಾಯಕತ್ವದ ಬಗ್ಗೆ ಕೇಳಿ ಬರುತ್ತಿರುವ ಚರ್ಚೆಗಳಿಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ನೀವು ಏನು ಕೇಳಿದ್ರೂ ನನ್ನ ಉತ್ತರ ಹೀಗೆ ಇರುತ್ತೆ. ಈ ಬಗ್ಗೆ ನಿಮಗೆ ನನ್ನಿಂದ ವಿವಾದಾತ್ಮಕ ಉತ್ತರಗಳು ಬರುವುದಿಲ್ಲ. ಈ ಬಗ್ಗೆ ಜಾಸ್ತಿ ಮಾತನಾಡೋದು ಬೇಡ. ನಮ್ಮ ನಾಯಕ ವಿರಾಟ್ ಕೊಹ್ಲಿ. ಈ ಕುರಿತು ನೀವು ಎಷ್ಟೇ ಕೆದಕಿದ್ರೂ ಯಾವುದೇ ಮಸಾಲೆ (ವಿವಾದ) ಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ರಹಾನೆ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಅಜಿಂಕ್ಯಾ ರಹಾನೆ ಅವರು ರೋಹಿತ್ ಶರ್ಮಾ ಅವರನ್ನು ಕೂಡ ಸಮರ್ಥಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿ ಅವರು 100 ಅಥವಾ 150 ರನ್ ದಾಖಲಿಸಿಲ್ಲ. ಹಾಗಂತ ಅವರನ್ನು ಕೇವಲ ಎರಡು ಇನಿಂಗ್ಸ್ ಗಳಿಂದ ಕೆಟ್ಟ ಆಟಗಾರ ಅಂತ ಪರಿಗಣಿಸಲು ಸಾಧ್ಯವಿಲ್ಲ. ಆತ ಅದ್ಭುತ ಬ್ಯಾಟ್ಸ್ ಮೆನ್ . ಆತನ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಅಜಿಂಕ್ಯಾ ರಹಾನೆ ಅವರು ತಾನು ನಾಯಕ ಸ್ಥಾನ ಆಕಾಂಕ್ಷಿಯಲ್ಲ ಎಂಬುದನ್ನು ಹೇಳಿದ್ದಾರೆ. ಹಾಗೇ ತಂಡದ ಆಟಗಾರರನ್ನು ಸಮರ್ಥಿಸಿಕೊಂಡು ತಂಡದಲ್ಲಿರುವ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ.