ಫೆಬ್ರವರಿ 15ರಿಂದ ಎಲ್ಲಾ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ : ಇಲ್ಲದಿದ್ದರೆ 2 ಪಟ್ಟು ದಂಡ ಕಟ್ಟಲು ರೆಡಿಯಾಗಿ..!
ನವದೆಹಲಿ: ಫೆಬ್ರವರಿ 15 ರಿಂದ ಎಲ್ಲಾ ವಾಹನಗಳಿಗೂ ಫಾಸ್ಟ್ಯಾಗ್ ಕಡ್ಡಾಯವಾಗಿದೆ. ಇಲ್ಲದೇ ಹೋದರೆ ಎರಡು ಪಟ್ಟು ಅಧಿಕ ಶುಲ್ಕ ವಿಧಿಸಲಾಗುವುದು ಎಂದು ಹೇಳಲಾಗಿದೆ. ಈ ಹಿಂದೆ ಜನವರಿ 1 ರಿಂದಲೇ ಫಾಸ್ಟ್ಯಾಗ್ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ ಕೊರೊನಾ ಹಾಗೂ ಇತರೇ ಕಾರಣಗಳಿಂದಾಗಿ ವಿನಾಯಿತಿ ನೀಡಿ ಫೆಬ್ರವರಿ 15 ರವರೆಗೂ ವಿಸ್ತರಿಸಲಾಗಿದ್ದು ಸೋಮವಾರದಿಂದ ಎಲ್ಲ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯವಾಗಿರುತ್ತದೆ. ಈ ಬಾರಿ ವಿಸ್ತರಣೆಯಾಗುವುದಿಲ್ಲ ಎಂದು ಕೇಂದ್ರ ರಸ್ತೆ ಹೆದ್ದಾರಿ ಪ್ರಾಧಿಕಾರವೂ ಈಗಾಗಲೇ ತಿಳಿಸಿದೆ.
ದೇಶಾದ್ಯಂತ ಟೋಲ್ ಗಳಲ್ಲಿ ಫಾಸ್ಟ್ಯಾಗ್ ಮೂಲಕ ತೆರಿಗೆ ಪಾವತಿಸಬೇಕು. ಫಾಸ್ಟ್ಟ್ಯಾಗ್ ಇಲ್ಲದ ವಾಹನಗಳು ಎರಡು ಪಟ್ಟು ತೆರಿಗೆ ಪಾವತಿಸಬೇಕು. ಫೆಬ್ರವರಿ 15 ರಿಂದಲೇ ನಿಯಮ ಜಾರಿಯಾಗಲಿದ್ದು ಸದ್ಯಕ್ಕೆ ಯಾವುದೇ ವಿನಾಯಿತಿ ನೀಡದಿರಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2019 ರಲ್ಲಿ ಫಾಸ್ಟ್ಯಾಗ್ ಆರಂಭಿಸಿದ್ದು ಟೋಲ್ ಶುಲ್ಕ ಪಾವತಿಗಳನ್ನು ಇದರ ಮೂಲಕವೇ ಪಾವತಿಸಬೇಕಿದೆ.
Whaaaat…! ಇಲ್ಲಿ ಗರ್ಲ್ ಫ್ರೆಂಡ್ಸ್ ಬಾಡಿಗೆಗೆ ಸಿಗ್ತಾರಾ..! : ಚೀನಾದ INTRESTING FACTS..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel